ಚೆನ್ನೈ,ಮೇ,26(Daijiworld News/AZM):ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೆ ಎಡಪ್ಪಾಡಿ ಕೆ. ಪಳನಿಸ್ವಾಮಿಯವರು ರಾಜೀನಾಮೆ ನೀಡಬೇಕೆಂದು ಡಿಎಂಕೆ ಮುಖಂಡರು ಆಗ್ರಹಿಸಿದ್ದಾರೆ.
ತಮಿಳುನಾಡಿನ ಲೋಕಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಕೇವಲ ಒಂದು ಸ್ಥಾನ ಗೆದ್ದ ಹಿನ್ನಲೆ ಮುಖ್ಯಮಂತ್ರಿಯ ರಾಜೀನಾಮೆಗೆ ಆಗ್ರಹಿಸಲಾಗಿದೆ. ಮತ್ತೊಂದೆಡೆ ಡಿಎಂಕೆ ರಾಜ್ಯದಲ್ಲಿ 23 ಸ್ಥಾನಗಳ ಗೆಲುವು ಸಾಧಿಸಿದ್ದು, ಎಐಎಡಿಎಂಕೆ ಸೋಲಿಗೆ ಸಿಎಂ ಪಳನಿಸ್ವಾಮಿ ಅವರೇ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು ಎಂದು ಡಿಎಂಕೆ ನಾಯಕ ದಯಾನಿಧಿ ಮಾರನ್ ಹೇಳಿದ್ದಾರೆ.
ಅಲ್ಲದೆ, ಎಐಎಡಿಎಂಕೆ ತನ್ನ ಏಕಾಂಗಿ ಸ್ಥಾನವನ್ನು ಗೆಲ್ಲಲು ಹಣದ ಶಕ್ತಿಯನ್ನು ಬಳಸಿಕೊಂಡಿದೆ ಎಂದು ಚೆನ್ನೈ ಸೆಂಟ್ರಲ್ ಎಂಪಿ ಆರೋಪಿಸಿದ್ದಾರೆ. ತನ್ನ ಏಕೈಕ ಸ್ಥಾನ ಗೆದ್ದಿರುವುದೂ ಸಹ ಹಣದ ಶಕ್ತಿಯಿಂದಲೇ ಎಂದು ದಯಾನಿಧಿ ಮಾರನ್ ಹೇಳಿದ್ದಾರೆ.