ನವದೆಹಲಿ, ಸೆ.02 (DaijiworldNews/TA):ಶಾಸಕರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕ ಅಮಾನತುಲ್ಲಾ ಖಾನ್ ಅವರ ನಿವಾಸಕ್ಕೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಇಸಿದ್ದಾರೆ.
ಈ ಬಗ್ಗೆ ಖಾನ್ X ನಲ್ಲಿ ವೀಡಿಯೊ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ED ತಂಡವು ಅವರನ್ನು ಬಂಧಿಸಲು ಯೋಜಿಸಿದೆ ಎಂದು ಹೇಳಿದ್ದಾರೆ. "ಶೋಧನೆಯ ನೆಪದಲ್ಲಿ ಇಡಿ ತಂಡ ನನ್ನನ್ನು ಬಂಧಿಸಲು ಬಂದಿದೆ.
ನನಗೆ ಮತ್ತು ಆಪ್ ನಾಯಕರಿಗೆ ಕಿರುಕುಳ ನೀಡಲು ಅವರು ಈ ರೀತಿ ಮಾಡುತ್ತಿದ್ದಾರೆ. ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದು ಅಪರಾಧವೇ? ಈ ಸರ್ವಾಧಿಕಾರ ಎಷ್ಟು ದಿನ ಉಳಿಯುತ್ತದೆ? ಎಂದು ಆಕ್ರೋಶ ಹೊರಹಾಕಿದ್ದಾರೆ.