ನವದೆಹಲಿ,ಮೇ26(DaijiworldNews/AZM):"ಹೋರಾಟ ಎಷ್ಟೇ ದೀರ್ಘವಾಗಿದ್ದರೂ, ದೇಶದ ಮೌಲ್ಯಗಳನ್ನು ರಕ್ಷಿಸುವ ಹಾದಿಯಲ್ಲಿ ನಾನೆಂದೂ ಹಿಂದೆ ಸರಿಯುವುದಿಲ್ಲ" ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದು, ರಾಯ್ ಬರೇಲಿಯಲ್ಲಿ ತನ್ನನ್ನು ಗೆಲ್ಲಿಸಿದ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.
ರಾಯ್ ಬರೇಲಿ ಜನತೆಯನ್ನು ಸಂಬೋಧಿಸಿ ಸೋನಿಯಾ ಗಾಂಧಿ ಪತ್ರ ಬರೆದಿದ್ದು, "ಲೋಕಸಭಾ ಚುನಾವಣೆಯಲ್ಲಿ ನನ್ನ ಮೇಲೆ ನನಗೆ ವಿಶ್ವಾಸವಿತ್ತು. ಇದರೊಂದಿಗೆ ನನ್ನ ಗೆಲುವಿಗಾಗಿ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸಿದ್ದಾರೆ. ಹಾಗೆಯೇ ಎಸ್ಪಿ, ಬಿಎಸ್ಪಿ, ಸ್ವಾಬಿಮಾನ ದಳದ ಪ್ರತಿಯೊಬ್ಬರೂ ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ" ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಬರೆದಿದ್ದಾರೆ.
"ನನ್ನ ಜೀವನವು ನಿಮ್ಮ ಮುಂದೆ ತೆರೆದ ಪುಸ್ತಕದಂತಿದೆ. ನೀವೇ ನನ್ನ ಕುಟುಂಬ. ನೀವು ತುಂಬುವ ಧೈರ್ಯವೇ ನನ್ನ ನಿಜವಾದ ಶಕ್ತಿ" ಎಂದಿರುವ ಸೋನಿಯಾ, "ಮುಂದಿನ ದಿನಗಳು ಮತ್ತಷ್ಟು ಕಠಿಣವಾಗಿರಲಿವೆ ಎಂಬುದು ನನಗೆ ತಿಳಿದಿದೆ ಎಂದು ಪತ್ರದಲ್ಲಿ ನರೆದಿದ್ದಾರೆ.