ನವದೆಹಲಿ, ಸೆ.04 (DaijiworldNews/AK): ಸಂಘರ್ಷ ಪೀಡಿತ ಮಣಿಪುರದ ಜನರನ್ನು ರಕ್ಷಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ಈ ಮೂಲಕ ಭಾರತೀಯರಿಗೆ ಮಾಡಲಾದ ದ್ರೋಹಗಳ ಪಟ್ಟಿಗೆ ಅವರ ಈ ನಡೆಯು ಸೇರ್ಪಡೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋ ಸ್ಟ್ ಹಂಚಿಕೊಂಡಿರುವ ಅವರು, ಹಿಂಸಾಚಾರ ಪೀಡಿತ ಮಣಿಪುರವನ್ನು ಸಹಜ ಸ್ಥಿತಿಗೆ ತರಲು ಡಬಲ್ ಎಂಜಿನ್ ಸರ್ಕಾರ ಏನನ್ನೂ ಮಾಡಿಲ್ಲ, ಸುಮಾರು 16 ತಿಂಗಳಿಂ ದ ಗಲಭೆ ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಪಿಸಿದರು.
ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಲು ಶಾಂತಿ ಸಂಧಾನದಂತಹ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಹೇಳಿದ್ದಾರೆ.