ಕೋಲ್ಕತ್ತಾ , ಸೆ.8(DaijiworldNews/AK):ಕೋಲ್ಕತ್ತಾ ತರಬೇತಿ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆಯನ್ನು ವಿರೋಧಿಸಿ ಟಿಎಂಸಿಗೆ ಸಂಸದ ಜವಾಹರ್ ಸರ್ಕಾರ್ ರಾಜೀನಾಮೆ ನೀಡಿದ್ದಾರೆ.

ಕೋಲ್ಕತ್ತಾದ ಆರ್ಜಿ ಕರ್ ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ನಡೆದಿದ್ದು, ಈ ನಡೆದ ಎಲ್ಲ ಘಟನೆಯನ್ನು ಬಂಗಾಳ ಸರ್ಕಾರ ನಿರ್ವಹಿಸಿದ ಕ್ರಮವನ್ನು ವಿರೋಧಿಸಿ ಅಧಿಕಾರ ತ್ಯಜಿಸಿದ್ದಾರೆ.
ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರಿಗೆ ಬರೆದ ಪತ್ರದಲ್ಲಿ, ತಮ್ಮದೇ ಪಕ್ಷದಲ್ಲಿ ಭ್ರಷ್ಟರ ವರ್ತನೆ ಮಿತಿ ಮೀರಿದೆ.ತಪ್ಪಿತಸ್ಥರ ಬಗ್ಗೆ ಮಮತಾ ಬ್ಯಾನರ್ಜಿ ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳುತ್ತೆ ಎಂದು ಭಾವಿಸಿದ್ದೆ ಆದರೆ ಅಂತಹ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಶೀಘ್ರ ಶಾಂತಿ , ನೆಮ್ಮದಿ ನೆಲೆಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.