ದೆಹಲಿ, ಸೆ.9(DaijiworldNews/AA): ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಆದರೆ ಸಾಧಿಸುವ ಛಲವಿದ್ದರೆ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ಆರ್ಥಿಕ ಸಂಕಷ್ಟದ ನಡುವೆ ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರೀತಿ ಹೂಡಾ ಅವರ ಸ್ಪೂರ್ತಿದಾಯಕ ಕಥೆ ಇದು.
ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದ ಪ್ರೀತಿ ಅವರು 10 ನೇ ತರಗತಿಯ ಪರೀಕ್ಷೆಯಲ್ಲಿ 77% ಅಂಕ ಗಳಿಸಿದ್ದರು. ಹಾಗೂ 12ನೇ ತರಗತಿಯ ಪರೀಕ್ಷೆಯಲ್ಲಿ 87% ಅಂಕ ಪಡೆದಿದ್ದರು. ಪ್ರೀತಿ ಅವರ ಕುಟುಂಬವು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕಾರಣ ಆಕೆಯ ಪೋಷಕರು ಶಿಕ್ಷಣವನ್ನು ತ್ಯಜಿಸಿ ಮದುವೆಯಾಗಲು ಪ್ರೋತ್ಸಾಹಿಸುತ್ತಾರೆ. ಆದರೆ ಆಕೆ ತನ್ನ ಶಿಕ್ಷಣವನ್ನು ಮುಂದುವರೆಸಲು ನಿರ್ಧರಿಸುತ್ತಾರೆ. ದೆಹಲಿಯ ಲಕ್ಷ್ಮಿ ಬಾಯಿ ಕಾಲೇಜಿಗೆ ಸೇರಿಕೊಂಡ ಅವರು ಹಿಂದಿಯಲ್ಲಿ ಪದವಿ ಪಡೆಯುತ್ತಾರೆ.
ಪ್ರೀತಿ ಹಿಂದಿ ವಿಷಯದಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಪಿಎಚ್ಡಿ ಓದಲು ಹೋದರು. ಪ್ರೀತಿ ಹೂಡಾ ತನ್ನ ಆರಂಭಿಕ ವರ್ಷಗಳಲ್ಲಿ ಸರ್ಕಾರಕ್ಕಾಗಿ ಕೆಲಸ ಮಾಡುವ ಆಸಕ್ತಿಯನ್ನು ಹೊಂದಿರಲಿಲ್ಲ ಎಂದು ವರದಿಯಾಗಿದೆ.
ಪ್ರೀತಿ ಹೂಡಾ ಅವರು ಯುಪಿಎಸ್ಸಿ ಪರೀಕ್ಷೆಗೆ ಮೋಜು ಮಸ್ತಿ ಮಾಡುತ್ತಲೇ ತಯಾರಿ ನಡೆಸುತ್ತಾರೆ. ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಪ್ರೀತಿ ಹೂಡಾ ಅವರು 288ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ.