ಮುಂಬೈ, ಸೆ.9(DaijiworldNews/AK): ಮನೆಯೊಳಗೆ ರಾಜಕೀಯ ಪ್ರವೇಶಿಸಬಾರದು. ಕುಟುಂಬದ ಮಧ್ಯೆ ಒಡಕು ಬಂದರೆ ಸಮಾಜ ಇಷ್ಟಪಡುವುದಿಲ್ಲ ಎಂದು ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ತಪ್ಪನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಪ್ಪಿನ ಅರಿವಾಗಿ ಎನ್ಡಿಎ ಜೊತೆ ಕೈ ಜೋಡಿಸಿರುವ ಅಜಿತ್ ಪವಾರ್ ಮೈತ್ರಿ ಕೂಟದಿಂದ ಹೊರ ಹೋಗುತ್ತಾರಾ ಈ ಪ್ರಶ್ನೆ ಉದ್ಭವಿಸಿದೆ.
ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ಅಜಿತ್ ತನ್ನ ಪತ್ನಿ ಸುನೇತ್ರಾ ಪವಾರ್ರವರನ್ನು ಸೋದರ ಸಂಬಂಧಿ ಎನ್ಸಿಪಿ (ಶರದ್) ನಾಯಕಿ ಸುಪ್ರಿಯಾ ಸುಳೆ ವಿರುದ್ಧ ಕಣಕ್ಕಿಳಿಸಿದ್ದರು. ಇದರಲ್ಲಿ ತಾವು ತಪ್ಪು ಮಾಡಿರುವುದಾಗಿ ಸಾರ್ವಜನಿಕವಾಗಿ ಒಪ್ಪಿಕೊಂಡರು.
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಕಾರಣ ಈಗ ಆಜಿತ್ ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದು ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿದೆ. ಕೆಲವೇ ದಿನಗಳಲ್ಲಿ ಅವರು `ಮಹಾಯುತಿ’ ಮೈತ್ರಿ ಕೂಟದಿಂದ ಹೊರಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.