ನವದೆಹಲಿ,ಮೇ 27(Daijiworld News/MSP): " ವಿಶ್ವದಲ್ಲಿ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳು ಭಾರತದಂತೆ ಎಳೆಯದಾಗಿದ್ದು, ಸರ್ವಾಧಿಕಾರ ಧೋರಣೆಯತ್ತ ವಾಲಿದ ದೇಶಗಳಲ್ಲಿ ಸರ್ವಾಧಿಕಾರ ಶೀಘ್ರದಲ್ಲೇ ಕ್ಷೀಣಿಸಿದವು " ಎಂದು ಮಾರ್ಮಿಕವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪಂಡಿತ್ ಜವಾಹರಲಾಲ್ ನೆಹರೂ ಅವರ 55ನೇ ಪುಣ್ಯ ಸ್ಮರಣೆಯ ದಿನದಂದು ಅವರನ್ನು ಸ್ಮರಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಭಾರತ ಶೀಘ್ರದಲ್ಲೇ ಸರ್ವಾಧಿಕಾರಿ ಆಡಳಿತಕ್ಕೆ ಒಳಪಡುವ ಸಾಧ್ಯತೆ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ.
70 ವರ್ಷಗಳಿಂದ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿರಲು ಅಂದು ಜವಾಹರಲಾಲ್ ನೆಹರೂ ನೀಡಿದ ಕೊಡುಗೆಗಳು ಸ್ಮರಣೀಯ. ನಮ್ಮ ರಾಷ್ಟ್ರವನ್ನು ಶಕ್ತಿಯುತವಾಗಿ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಬೆಳೆಯಲು ದುಡಿದಿದ್ದಾರೆ. ಮಾತ್ರವಲ್ಲ್ದೆ ದೇಶಕ್ಕೆ ಸ್ವತಂತ್ರ ಒದಗಿಸಲು ಕಷ್ಟ ಪಟ್ಟಿದ್ದಾರೆ. ಆಧುನಿಕ ಸಂಸ್ಥೆಗಳನ್ನು ನಿರ್ಮಿಸಿ ದೇಶವನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಕೊಡುಗೆಗಳನ್ನು 55ನೇ ಪುಣ್ಯ ಸ್ಮರಣೆಯ ದಿನವಾದ ಇಂದು ನಾವೆಲ್ಲರೂ ನೆನಪಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.