ನವದೆಹಲಿ,ಮೇ 27(Daijiworld News/MSP): ಜೈ ಶ್ರೀರಾಮ್ ಹೇಳುವಂತೆ ಬಲವಂತ ಮಾಡಿ ಗುರುಗ್ರಾಮದಲ್ಲಿ ಇತ್ತೀಚೆಗೆ ನಡೆದ ಮುಸ್ಲಿಂ ಯುವಕನೋರ್ವ ಮೇಲೆ ಹಲ್ಲೆ ಮತ್ತು ಧರ್ಮ ನಿಂದನೆಯನ್ನು ಪೂರ್ವ ದೆಹಲಿಯ ನೂತನ ಸಂಸದ, ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಖಂಡಿಸಿದ್ದಾರೆ. ಮಾತ್ರವಲ್ಲದೆ ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಂಸದ ಗೌತಮ್ ಗಂಭೀರ್, ಗುರುಗ್ರಾಮದಲ್ಲಿ ನಡೆದ ಘಟನೆ ಖಂಡನೀಯ ನಮ್ಮದು ನಮ್ಮದು ಜಾತ್ಯತೀತ ರಾಷ್ಟ್ರ ಅದ್ದರಿಂದಲೇ ಇಲ್ಲಿ, ಜಾವೇದ್ ಅಕ್ತರ್ ಅಂಥವರು ‘ಓ ಪಾಲನ್ ಹರೇ, ನಿರ್ಗುಣ ಔರ್ ನ್ಯಾಯ್ರೇ,’ ಎಂದು ಬರೆಯುತ್ತಾರೆ. ರಾಕೇಶ್ ಓಮ್ ಮೆಹ್ರಾ ಅಂಥವರು ‘ಆರ್ಜ್ಹಿಯಾ’ ಎಂದು ಬರೆಯಲು ಸಾಧ್ಯವಾಗಿತ್ತದೆ ’ಎಂದಿದ್ದಾರೆ.
ಏನಿದು ಘಟನೆ: ದೆಹಲಿಯ ಹೊರವಲಯದ ಗುರುಗ್ರಾಮದಲ್ಲಿ ಕೆಲದಿನಗಳ ಪ್ರಾರ್ಥನೆ ಮುಗಿಸಿ ಮನೆ ವಾಪಾಸ್ ಆಗುತ್ತಿದ್ದ 25 ವರ್ಷದ ಮೊಹಮ್ಮದ್ ಬರ್ಕತ್ ಎಂಬ ಮುಸ್ಲಿಂ ಯುವಕನನ್ನು ತಡೆದಿದ್ದ ಕೆಲ ಹಿಂದೂ ಬಲ ಪಂಥೀಯ ಕಾರ್ಯಕರ್ತರು ಆತ ಧರಿಸಿದ್ದ ಟೋಪಿಯನ್ನು ಬಲವಂತವಾಗಿ ತೆಗೆಸಿದ್ದರು. ಅಲ್ಲದೆ, ‘ಜೈ ಶ್ರೀರಾಮ್’ ಎಂದು ಹೇಳುವಂತೆ ಒತ್ತಾಯಿಸಿದ್ದರು.