ಮುಂಬೈ,ಸೆ.11 (DaijiworldNews/TA):ಖ್ಯಾತ ಕಲಾವಿದ ಸೈಯದ್ ಹೈದರ್ ರಾಝಾ ಅವರ ₹ 2.5 ಕೋಟಿಗೂ ಹೆಚ್ಚು ಮೌಲ್ಯದ ಪೇಂಟಿಂಗ್ ಅನ್ನು ದಕ್ಷಿಣ ಮುಂಬೈನ ಗೋದಾಮಿನಿಂದ ಕಳವು ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
1992 ರಲ್ಲಿ ಖ್ಯಾತ ವರ್ಣಚಿತ್ರಕಾರ ಮಾಡಿದ ಪ್ರಕೃತಿ ಎಂಬ ಪೇಂಟಿಂಗ್ ಅನ್ನು ಅಸ್ತಗುರು ಆಕ್ಷನ್ ಹೌಸ್ ಪ್ರೈವೇಟ್ ಲಿಮಿಟೆಡ್ನ ಗೋದಾಮಿನಿಂದ ಕಳವು ಮಾಡಲಾಗಿದೆ ಎಂದು ಎಂಆರ್ಎ ಮಾರ್ಗ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಸೋಮವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ತಮ್ಮ ವೃತ್ತಿಜೀವನದ ಬಹುಪಾಲು ಫ್ರಾನ್ಸ್ನಲ್ಲಿ ವಾಸಿಸುತ್ತಿದ್ದ ಮತ್ತು ಕೆಲಸ ಮಾಡಿದ ಶ್ರೀ ರಾಝಾ ಅವರು 2016 ರಲ್ಲಿ 94 ನೇ ವಯಸ್ಸಿನಲ್ಲಿ ನಿಧನರಾದರು.
ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಅವರ ಅಕ್ರಿಲಿಕ್ ಕಲಾಕೃತಿಯನ್ನು ದಕ್ಷಿಣ ಮುಂಬೈನ ಬಲ್ಲಾರ್ಡ್ ಪಿಯರ್ನಲ್ಲಿರುವ ಗೋದಾಮಿನಲ್ಲಿ ಇರಿಸಲಾಗಿತ್ತು. ಗೋದಾಮಿನಲ್ಲಿ ಪೇಂಟಿಂಗ್ ಕಾಣದ ಹಿನ್ನೆಲೆಯಲ್ಲಿ ಹರಾಜು ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಸಿದ್ದಾಂತ ಶೆಟ್ಟಿ ಅವರು ಎಂಆರ್ಎ ಮಾರ್ಗ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಈ ವರ್ಷ ಪೇಂಟಿಂಗ್ ಮಾಲೀಕರು ಅದನ್ನು ಹರಾಜಿಗೆ ಇಡುವಂತೆ ಅಧಿಕಾರಿಗಳನ್ನು ಕೇಳಿದ್ದಾರೆ, ಆದರೆ ಸುಮಾರು 1,500 ಕಲಾಕೃತಿಗಳ ಹುಡುಕಾಟದ ನಂತರ ಆ ಚಿತ್ರ ಗೋದಾಮಿನಲ್ಲಿ ಕಂಡುಬಂದಿಲ್ಲ ಈ ಕಾರಣದಿಂದ ಪೇಂಟಿಂಗ್ ಕಾಣೆಯಾಗಿದೆ ಎಂದು ತಿಳಿದ ನಂತರ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.