ಪಶ್ಚಿಮ ಬಂಗಾಳ, ಮೇ 27(Daijiworld News/MSP): ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಮುಂದುವರಿದಿದ್ದು ಭಾನುವಾರ ತಡರಾತ್ರಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
ಉತ್ತರ 24 ಪರಾಗಣ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಹತ್ಯೆ ಮಾಡಲಾದ ಬಿಜೆಪಿ ಕಾರ್ಯಕರ್ತನನ್ನು 24 ವರ್ಷದ ಚಂದನ್ ಶಾ ಎಂದು ಗುರುತಿಸಲಾಗಿದೆ.
ಈ ಹಿಂದೆ ಚಕದಹದ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತ ಸಂತು ಘೋಷ್ (23) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅವರು ಶುಕ್ರವಾರ ರಾತ್ರಿ 10 ಗಂಟೆಗೆ ಫೋನ್ ಕರೆ ಸ್ವೀಕರಿಸಿ ಮಾತನಾಡುವುದಕ್ಕಾಗಿ ಮನೆಯಿಂದ ಹೊರಬಂದಾಗ ಸಂತು ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು.
ಫಲಿತಾಂಶದ ಬಳಿಕ ಪಶ್ಚಿಮಬಂಗಾಳದ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಮಾರಾಮಾರಿ, ವಿವಿಧೆಡೆ ಹಿಂಸಾಚಾರ ಇನ್ನೂ ನಿಂತಿಲ್ಲ.