ಬೆಂಗಳೂರು, ಮೇ 28 (Daijiworld News/MSP): ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ, ದಕ್ಷ ಅಧಿಕಾರಿ ಕೆ. ಅಣ್ಣಾಮಲೈ IPS ಗೆ ರಾಜೀನಾಮೆ ನೀಡಿ ತಮಿಳುನಾಡು ರಾಜಕೀಯಕ್ಕೆ ಕಾಲಿಡುತ್ತಾರೆ ಎನ್ನುವ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದ್ರೆ ಈ ಸುದ್ದಿಯನ್ನ ಸ್ವತಃ ಅಣ್ಣಾಮಲೈ ಅವರು ಅಲ್ಲಗಳೆದಿದ್ದಾರೆ.
ಆದರೆ ರಾಜಕೀಯಕ್ಕೆ ಕಾಲಿಡುವ ಸುದ್ದಿಯನ್ನು ತಳ್ಳಿಹಾಕದ್ದರೂ, ತಮ್ಮ ರಾಜೀನಾಮೆ ವಿಚಾರದ ವದಂತಿ ಬಗ್ಗೆ ಅವರೇನು ಹೇಳಿಲ್ಲ ಹೀಗಾಗಿ ಅವರ ನಡೆ ಕೂತೂಹಲ ಮೂಡಿಸಿದೆ.
ಸುಮಾರು ಹತ್ತು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಅಣ್ಣಾಮಲೈ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಬೆಂಗಳೂರು ದಕ್ಷಿಣದ ಡಿಸಿಪಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಇವರ ವೃತ್ತಿಪರತೆ, ಭ್ರಷ್ಟಾಚಾರ ಮುಕ್ತ ಹಾಗೂ ಖಡಕ್ ಕಾರ್ಯ ವೈಖರಿಗೆ ಕಳ್ಳರು, ದರೋಡೇಕೋರರು, ಕೊಲೆಗಡುಕರು ಅಕ್ಷರಶಃ ನಡುಗುತ್ತಾರೆ. 2011ರ ಐಪಿಎಸ್ ಬ್ಯಾಚ್ನವರಾದ ಅಣ್ಣಾಮಲೈ 2013ರಲ್ಲಿ ಕಾರ್ಕಳದ ಎಎಸ್ಪಿ ಆಗಿ ನೇಮಕಗೊಂಡರು. ನಂತರ ಚಿಕ್ಕಮಗಳೂರು ಎಸ್ಪಿ ಆದರು. ಸುಮಾರು ಹತ್ತು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಅಣ್ಣಾಮಲೈ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳ ವಿಚಾರವಾಗಿ ಇಂದು ಸಂಜೆ ವೇಳೆಗೆ ಅಣ್ಣಾಮಲೈ ಪತ್ರಿಕಾಗೋಷ್ಟಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ರಾಜಕೀಯ ನಡೆಯ ಬಗ್ಗೆ ತಳ್ಳಿ ಹಾಕಿದ್ರೂ ರಾಜೀನಾಮೆ ವಿಚಾರದ ಬಗ್ಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಒಟ್ಟಾರೆ ಅವರ ನಡೆಯ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.