ನವದೆಹಲಿ, ಸೆ.15(DaijiworldNews/AA): ಈರುಳ್ಳಿ ದರ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸೆ.5ರಂದು ಕೇಂದ್ರ ಸರ್ಕಾರ ರಿಯಾಯಿತಿ ಬೆಲೆಯ ಮಾರಾಟ ಯೋಜನೆಯನ್ನು ಪ್ರಾರಂಭಿಸಿತ್ತು. ಇದೀಗ ಈ ಯೋಜನೆಯು ಬೆಂಗಳೂರು ಸೇರಿ ಇನ್ನಷ್ಟು ನಗರಗಳಿಗೆ ವಿಸ್ತರಣೆಯಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ.
ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದ ಬೆನ್ನಲ್ಲೇ ಈರುಳ್ಳಿ ದರ ಇಳಿಮುಖವಾಗಿತ್ತು. ಈ ಯೋಜನೆ ಅಡಿಯಲ್ಲಿ ಕೆ.ಜಿ. ಈರುಳ್ಳಿಗೆ 35 ರೂ. ಇರಲಿದೆ. ಈ ಯೋಜನೆಯನ್ನು ಈಗ ಬೆಂಗಳೂರು, ಚೆನ್ನೈ, ಕೋಲ್ಕತಾ, ಪಾಟ್ನಾ, ರಾಂಚಿ, ಭುವನೇಶ್ವರ ಹಾಗೂ ಗುವಾಹಾಟಿಗೆ ವಿಸ್ತರಣೆ ಮಾಡಲಾಗುತ್ತಿದೆ.
ಇನ್ನು ದೀಪಾವಳಿ ವೇಳೆಗೆ ಹೊಸ ಇಳುವರಿ ಆಗಮನದಿಂದ ಪೂರೈಕೆ ಹೆಚ್ಚಲಿದ್ದು, ಅಲ್ಲಿಯ ತನಕ ಸರ್ಕಾರದ ಅಗ್ಗದ ದರದಲ್ಲಿ ಈರುಳ್ಳಿ ಮಾರಾಟ ಮುಂದುವರಿಸಲಿದೆ ಎಂದು ಮೂಲಗಳಿಮದ ತಿಳಿದುಬಂದಿದೆ.