ವಿಜಯಪುರ, ಸೆ.22(DaijiworldNews/AA): ಸಿಎಂ ಸಿದ್ದರಾಮಯ್ಯ ಖುರ್ಚಿ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ಆದರೂ, ಅವರ ಖುರ್ಚಿ ಅಲುಗಾಡುತ್ತಿಲ್ಲ ಎನ್ನುತ್ತಾ ಎಲ್ಲರೂ ಮೇಲ್ನೋಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂ.ಬಿ.ಪಾಟೀಲ್ ಸೇರಿದಂತೆ ಎಲ್ಲರಿಗೂ ಮುಖ್ಯಮಂತ್ರಿ ಆಗಬೇಕು ಹಂಬಲ ಇದೆ. ಅಷ್ಟಕ್ಕೂ ಸಿದ್ದರಾಮಯ್ಯ ಪರಿಸ್ಥಿತಿ ಏನಾಗುತ್ತೋ ಗೊತ್ತಿಲ್ಲ. ರಾಜೀನಾಮೆ ಕೊಡುತ್ತಾರೋ, ಇಲ್ಲ ಜೈಲಿಗೆ ಹೋಗುತ್ತಾರೋ ತಿಳಿದಿಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕುರ್ಚಿ ಗಟ್ಟಿಯಿಲ್ಲ ಎನ್ನುವ ಎಂ.ಬಿ.ಪಾಟೀಲ್ ಅವರ ಖುರ್ಚಿ ಏನಾಗುತ್ತಿದೆ?, ಅವರ ಕಣ್ಣು ಸಿಎಂ ಖುರ್ಚಿ ಮೇಲಿದೆ. ಅವರು ತೋರಿಕೆಗಾಗಿ ಮೇಲೆ ಸಿಎಂಗೆ ಬೆಂಬಲ ಎನ್ನುತ್ತಾರೆ. ಒಳಗೆ ಅವರಿಗೂ ಸಿಎಂ ಆಗುವ ಹಂಬಲವಿದೆ. ಅವರು ಸಿಎಂ ಆಗಲು ನನ್ನ ತಕರಾರು ಇಲ್ಲ. ಅವರು ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದಾರೆ. ಕೇವಲ ಎಂ.ಬಿ.ಪಾಟೀಲರಲ್ಲ, ಬಹುತೇಕ ರಾಜಕಾರಣಿಗಳಿಗೂ ಇದೇ ರೀತಿ ಹಂಬಲವಿದೆ ಎಂದು ಹೇಳಿದರು.