ಮೈಸೂರು,ಮೇ29(Daijiworld News/AZM):ದಿ||ಶಿವಳ್ಳಿಯಿಂದ ತೆರವಾದ ಸ್ಥಾನಕ್ಕೆ ಭರ್ತಿಯಷ್ಟೇ ಸಚಿವ ಸಂಪುಟ ಸಭೆಯಲ್ಲಿ ಇಂದು ನಡೆಯುತ್ತದೆ ಹೊರತು, ಸಚಿವ ಸಂಪುಟ ರಚನೆಯೂ ಇಲ್ಲ. ವಿಸ್ತರಣೆಯೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಮಹತ್ವದ ವಿಚಾರಗಳ ಕುರಿತು ಸಚಿವ ಸಂಪುಟ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಕೇಲವ ದಿವಂಗತ ಶಿವಳ್ಳಿಯವರ ಅಕಾಲಿಕ ಸಾವಿನಿಂದ ತೆರವಾದ ಸ್ಥಾನಕ್ಕೆ ಭರ್ತಿಯ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು.
ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆಯ ಮಾಡಲಾಗುತ್ತಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಚಿವ ಸಂಪುಟ ಪುನರ್ ರಚನೆಯೂ ಇಲ್ಲ. ವಿಸ್ತರಣೆಯೂ ಇಲ್ಲ ಎಂದು ಹೇಳಿದ್ದಾರೆ.