ನವದೆಹಲಿ, ಮೇ 29(Daijiworld News/MSP): ನೂತನ ಸರ್ಕಾರದಲ್ಲಿ ತಮಗೆ ಸಚಿವ ಹುದ್ದೆ ಬೇಡವೆಂದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕಳೆದ 18 ತಿಂಗಳಿಂದ ಅನಾರೋಗ್ಯ ಕಾಡುತ್ತಿದ್ದು, ವೈದ್ಯರ ಸಹಾಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮನವಿ ಮಾಡಿದ್ದು, ಈ ಬಾರಿ ಸಚಿವ ಸ್ಥಾನ ನೀಡಬೇಡಿ, ನನಗೆ ಈವರೆಗೆ ಸಚಿವರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಧನ್ಯವಾದ ಎಂದು ಜೇಟ್ಲಿ ಮೋದಿ ಅವರಿಗೆ ಹೇಳಿದ್ದಾರೆ. ಅದರೂ ಸರ್ಕಾರದ ಹಾಗೂ ಪಕ್ಷದ ಕೆಲಸವನ್ನು ಅನೌಪಚಾರಿಕವಾಗಿ ನಿಭಾಯಿಸಲು ಸಿದ್ದ ಎಂದಿದ್ದಾರೆ
66 ವರ್ಷದ ಜೇಟ್ಲಿ ಕಳೆದ ಜನವರಿ 22ರಂದು ಎಡಗಾಲಿನಲ್ಲಿ ಮೃದು ಅಂಗಾಶ ಕ್ಯಾನ್ಸರ್ ಸಮಸ್ಯೆ ತಲೆದೋರಿ ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆಗೊಳಗಿದ್ದರು. ಮೋದಿ ಸಂಪುಟದಲ್ಲಿ ಪ್ರಭಾವಶಾಲಿ ನಾಯಕರಾಗಿದ್ದ ಜೇಟ್ಲಿ ಹಣಕಾಸು ಸಚಿವರಾಗಿದ್ದಾಗ ಪ್ರಮುಖ ಶಾಸನಗಳಾದ ಜಿಎಸ್ ಟಿ, ತ್ರಿವಳಿ ತಲಾಖ್ ಮೊದಲಾದವುಗಳನ್ನು ಜಾರಿಗೆ ತಂದಿದ್ದರು.
ದೇಶದ 17ನೇ ಪ್ರಧಾನಿಯಾಗಿ ನರೇಂದ್ರ ಮೋದಿಯವರು ನಾಳೆ ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು ಅವರ ಜೊತೆ ನೂತನ ಸಚಿವ ಸಂಪುಟಕ್ಕೆ ಸಚಿವರುಗಳ ಪ್ರಮಾಣವಚನ ನಡೆಯಲಿದೆ.