ನವದೆಹಲಿ,ಮೇ 30 (Daijiworld News/MSP): ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲುತ್ತಿದ್ದು ಇದೇ ಹಿನ್ನಲೆಯಲ್ಲಿ ಇನ್ನು ಮುಂದೆ ಒಂದು ತಿಂಗಳುಗಳ ಕಾಲ ಯಾವುದೇ ಮಾಧ್ಯಮಗಳ ಡಿಬೆಟ್ ನಲ್ಲಿ ಭಾಗವಹಿಸಲು ಪಕ್ಷದ ವಕ್ತಾರರನ್ನು ಕಳುಹಿಸದಿರಲು ನಿರ್ಧರ ಮಾಡಿದೆ.
ಅಲ್ಲದೆ ಮಾಧ್ಯಮಗಳು ನಡೆಸುವ ಚರ್ಚೆಯಲ್ಲಿ ಪಕ್ಷದ ಪರವಾಗಿ ಯಾರು ಕೂಡ ಪಾಲ್ಗೊಳ್ಳದಂತೆ ಸೂಚನೆಯನ್ನು ರವಾನಿಸಿದೆ
ನಾವು ಮಾಧ್ಯಮವನ್ನು ಗೌರವಿಸುತ್ತೇವೆ. ಆದರೆ ತಿಂಗಳಮಟ್ಟಿಗೆ ಪಕ್ಷದ ವಕ್ತಾರರನ್ನು ಕಾರ್ಯಕ್ರಮಕ್ಕೆ ನಿಯೋಜಿಸದಂತೆ ಎಲ್ಲ ಟಿವಿ ಮಾಧ್ಯಮಗಳಿಗೂ ಮತ್ತೆ ಸಂಪಾದಕರಲ್ಲಿ ಮನವಿ ಮಾಡುತ್ತೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಮನವಿ ಮಾಡಿದ್ದಾರೆ.