ನವದೆಹಲಿ,ಮೇ 30 (Daijiworld News/MSP): ಪ್ರಚಂಡ ಬಹುಮತದೊಂದಿಗೆ ಮರಳಿ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದ ಬಹುನಿರೀಕ್ಷೆಯ ದ್ವಿತೀಯ ಅವಧಿಗೆ ಗುರುವಾರ ಚಾಲನೆ ದೊರೆಯಲಿದೆ. ರಾಷ್ಟ್ರಪತಿ ಭವನದ ಎದುರಿನ ಅಂಗಳದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವರು.
ನರೇಂದ್ರ ಮೋದಿ ಈ ಬಾರಿಯೂ ಪ್ರಮಾಣ ವಚನಕ್ಕಾಗಿ ಸ್ಥಳವನ್ನು ರಾಷ್ಟ್ರಪತಿ ಭವನದ ಹೊರಾಂಗಣವನ್ನೇ ಆಯ್ಕೆ ಮಾಡಿದ್ದಾರೆ. ಹೀಗಾಗಿ ರಾಷ್ಟ್ರಪತಿ ಭವನದ ಪ್ರಮಾಣ ಸ್ವೀಕರಿಸಿದ ದೇಶದ 4ನೇ ಪ್ರಧಾನಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ
ವಿಶೇಷ ಎಂದರೆ ಕಳೆದ ಬಾರಿ ಸಂಜೆ 6ಕ್ಕೆ ಪದಗ್ರಹಣ ಮಾಡಿದ್ದ ನರೇಂದ್ರ ಮೋದಿ ಈ ಸಾರಿ ಸಂಜೆ 7ರ ಸಮಯವನ್ನು ಆಯ್ಕೆಮಾಡಿದ್ದಾರೆ. ಇದರ ಹಿಂದೆ ಜ್ಯೋತಿಷ್ಯ ಶಾಸ್ತ್ರದ ಕಾರಣಗಳು ಏನಾದರೂ ಇರಬಹುದೇ ಎಂದು ಲೆಕ್ಕಚಾರ ಹಾಕಿದ್ರೆ ಅದು ತಪ್ಪು. ಯಾಕೆಂದರೆ ಮೋದಿ ಪ್ರಮಾಣ ವಚನಕ್ಕೆ ರಾತ್ರಿ 7ರ ಸಮಯ ನಿಗದಿ ಮಾಡಿರುವುದರ ಹಿಂದೆ ಕಾರಣ ಬೇರೆಯೇ ಇದೆ ವರದಿಗಳು ಬಹಿರಂಗಪಡಿಸಿದೆ.
ಈ ಹಿಂದಿನ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಂಜೆ ೬ಕ್ಕೆ ಆರಂಭವಾದ್ದರೂ ಭಾಗವಹಿಸುವ ಅಥಿತಿಗಳು ಸಂಜೆ 4- 4.30ಕ್ಕೆ ಆಸೀನರಾಗಬೇಕಿತ್ತು. ನವದೆಹಲಿಯಲ್ಲಿ ಸುಡುವ ಬಿಸಿಲಿ ಬೇರೆ. ಆದರೆ ಭದ್ರತೆಯ ಕಾರಣಕ್ಕೆ ರಾಷ್ಟ್ರಪತಿ ಭವನದೊಳಕ್ಕೆ ನೀರಿನ ಬಾಟಲಿಯನ್ನೂ ಒಯ್ಯುವಂತಿಲ್ಲ. ಹೀಗಾಗಿ ಅಲ್ಪಮಟ್ತಿಗೆ ಸಮಸ್ಯೆಯಾಗಿತ್ತು. ಇದೇ ಹಿನ್ನಲೆಯಲ್ಲಿ ಈ ಬಾರಿ ರಾತ್ರಿ 7ಕ್ಕೆ ಸಮಯ ನಿಗದಿಗೊಳಿಸಲಾಗಿದೆ. ಮಾತ್ರವಲ್ಲದೆ ಈ ಬಾರಿ ಕುಡಿಯುವ ನೀರು ಒದಗಿಸಲೂ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.