ಚಿಕ್ಕಮಗಳೂರು, ಮೇ30(Daijiworld News/SS): ಅಂದಾಜು 4 ಲಕ್ಷಕ್ಕೂ ಹೆಚ್ಚು ಹಣವಿದ್ದ ದೇವಾಲಯದ ಹುಂಡಿಯನ್ನೇ ಕಳ್ಳರು ಕದ್ದೊಯ್ದ ಘಟನೆ ಜಿಲ್ಲೆಯ ಸಖರಾಯಪಟ್ಟದಲ್ಲಿ ನಡೆದಿದೆ.

ಇತಿಹಾಸ ಪ್ರಸಿದ್ಧ ಶಕುನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಕಳ್ಳರು ಹುಂಡಿಯಿಂದ ಹಣ ಕಳ್ಳತನ ನಡೆಸಿದ್ದಾರೆ. ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶಕುನ ರಂಗನಾಥ ಸ್ವಾಮಿ ದೇವಾಲಯದಲ್ಲಿ 4 ಲಕ್ಷಕ್ಕೂ ಹೆಚ್ಚು ಹಣವಿದ್ದ 4 ಹುಂಡಿ ಕಳ್ಳತನವಾಗಿದೆ. 8ಕ್ಕೂ ಹೆಚ್ಚು ಕಳ್ಳರು ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಶಕುನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಈ ಹಿಂದೆಯೂ ಹಲವು ಬಾರಿ ಕಳ್ಳತನವಾಗಿದೆ ಎಂದು ತಿಳಿದುಬಂದಿದ್ದು, 4ನೇ ಬಾರಿ ಹುಂಡಿ ಕಳ್ಳತನವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಸಖರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಜತೆಗೆ ಬೆರಳಚ್ಚು ತಜ್ಞರು ಹಾಗೂ ಡಾಗ್ ಸ್ವ್ಕಾಡ್ ತಂಡದವರು ಸಹ ತನಿಖೆ ನಡೆಸಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.