ನವದೆಹಲಿ, ಮೇ30(Daijiworld News/SS): ಅಭೂತಪೂರ್ವ ಯಶಸ್ಸಿನೊಂದಿಗೆ ಬಹುಮತದೊಂದಿಗೆ ಮರಳಿ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಮಂತ್ರಿಯಾಗಿ ಈಶ್ವರನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.
ಎನ್ಡಿಎ ಸರಕಾರದ ವೈಸ್ ಕ್ಯಾಪ್ಟನ್ ಆಗಿರುವ ರಾಜನಾಥ್ ಸಿಂಗ್ ಎರಡನೆಯವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಅಮಿತ್ ಅನಿಲ್ಚಂದ್ರ ಶಾ, ನಿತಿನ್ ಜಯರಾಮ್ ಗಡ್ಕರಿ, ನಂತರ ಕರ್ನಾಟಕದ ಡಿ.ವಿ. ಸದಾನಂದ ಗೌಡ ಪ್ರಮಾಣ ವಚನ ಸ್ವೀಕರಿಸಿದರು.
ನಂತರ ನಿರ್ಮಲಾ ಸೀತಾರಾಮನ್, ರಾಮ್ ವಿಲಾಸ್ ಪಾಸ್ವಾನ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಹರ್ಸಿಮ್ರತ್ ಕೌರ್ ಬಾದಲ್, ತಾವರ್ಚಂದ್ ಗೆಹ್ಲೋಟ್, ಸುಬ್ರಮಣ್ಯಯಂ ಜೈ ಶಂಕರ್, ರಮೇಶ್ ಪೋಖರಿಯಾಲ್, ಅರ್ಜುನ್ ಮುಂಡಾ, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್, ಡಾ. ಹರ್ಷವರ್ಧನ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಮುಖ್ತಾರ್ ಅಬ್ಬಾಸ್ ನಖ್ವಿ, ಪ್ರಹ್ಲಾದ್ ಜೋಷಿ,ಡಾ. ಮಹೇಂದ್ರನಾಥ್ ಪಾಂಡೆ, ಅರವಿಂದ ಸಾವಂತ್, ಗಿರಿರಾಜ್ ಸಿಂಗ್, ಗಜೇಂದ್ರ ಸಿಂಗ್ ಶೇಖಾವತ್, ಪ್ರಮಾಣ ವಚನ ಸ್ವೀಕರಿಸಿದರು.