ಹೊಸದಿಲ್ಲಿ, ಮೇ30(Daijiworld News/SS): ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿ, ಹೊಸ ಸರ್ಕಾರ ಸ್ಥಾಪಿಸಿದ್ದಾರೆ.
ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್'ನಲ್ಲಿ 7 ಗಂಟೆ ನಂತರ ನಡೆದ ಸಮಾರಂಭದಲ್ಲಿ ನರೇಂದ್ರ ದಾಮೋದರ್ ದಾಸ್ ಮೋದಿ ಅವರು 2ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಮೋದಿ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖ ಸಂಸದರು
ಲಕ್ನೋದಿಂದ ರಾಜನಾಥ್ ಸಿಂಗ್, ಗಾಂಧಿ ನಗರದಿಂದ ಅಮಿತ್ ಶಾ, ನಾಗ್ಪುರದಿಂದ ನಿತಿನ್ ಗಡ್ಕರಿ, ಬೆಂಗಳೂರು ಉತ್ತರದಿಂದ ಸದಾನಂದ ಗೌಡ, ರಾಜ್ಯ ಸಭಾ ಸದಸ್ಯೆಯಾಗಿರುವ ನಿರ್ಮಲಾ ಸೀತಾರಾಮನ್, ರಾಮವಿಲಾಸ್ ಪಾಸ್ವಾನ್, ಮಧ್ಯ ಪ್ರದೇಶದ ಮುರೈನಾ ಕ್ಷೇತ್ರದಿಂದ ನರೇಂದ್ರ ಸಿಂಗ್ ತೋಮರ್, ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ರವಿಶಂಕರ್ ಪ್ರಸಾದ್, ಬಟಿಂಡಾದಿಂದ ಹರ್ಸಿಮ್ರತ್ ಕೌರ್, ತಾವರ್ ಚಂದ್ ಗೆಹ್ಲೋಟ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಆಗಿರುವ ಎಸ್.ಜೈಶಂಕರ್ ಮೋದಿ ಸಂಪುಟದಲ್ಲಿ ಪ್ರಮಾಣ ವಚನ ಮಾಡಿದ್ದಾರೆ.
ಹರಿದ್ವಾರದಿಂದ ರಮೇಶ್ ಪೋಖ್ರಿಯಾಲ್, ಜಮ್ಷೆಡ್ ಪುರದಿಂದ ಅರ್ಜುನ್ ಮುಂಡಾ, ಅಮೇಠಿಯಿಂದ ಸ್ಮೃತಿ ಇರಾನಿ, ಚಾಂದಿನಿ ಚೌಕ್ನಿಂದ ಡಾ.ಹರ್ಷವರ್ಧನ್, ದೆಹಲಿಯ ರಾಜ್ಯಸಭಾ ಸದಸ್ಯರಾಗಿರುವ ಪ್ರಕಾಶ್ ಜಾವ್ಡೇಕರ್, ರಾಜ್ಯಸಭಾ ಸದಸ್ಯರಾದ ಪೀಯುಷ್ ಗೋಯಲ್, ರಾಜ್ಯಸಭಾ ಸಂಸದ ಧರ್ಮೇಂದ್ರ ಪ್ರಧಾನ್, ರಾಜ್ಯಸಭಾ ಸಂಸದರಾದ ಮುಖ್ತಾರ್ ಅಬ್ಬಾಸ್ ನಖ್ವಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಧಾರವಾಡದಿಂದ ಪ್ರಹ್ಲಾದ್ ಜೋಷಿ, ಉತ್ತರಪ್ರದೇಶದ ಚಂದೌಲಿಯಿಂದ ಮಹೇಂದ್ರನಾಥ್ ಪಾಂಡೆ, ಮುಂಬೈ ದಕ್ಷಿಣದಿಂದ ಅರವಿಂದ್ ಸಾವಂತ್, ಬರೇಲಿಯಿಂದ ಸಂತೋಷ್ ಕುಮಾರ್ ಗಂಗ್ವಾರ್, ಹರ್ಯಾಣದ ಗುಡಗಾಂವ್ನಿಂದ ಇಂದ್ರಜಿತ್ ಸಿಂಗ್, ಉತ್ತರ ಗೋವಾದಿಂದ ಶ್ರೀ ಪಾದ್ ನಾಯಕ್, ಉಧಂಪುರದಿಂದ ಜಿತೇಂದ್ರ ಸಿಂಗ್, ಅರುಣಾಚಲ ಪಶ್ಚಿಮದಿಂದ ಕಿರಣ್ ರಿಜಿಜು, ಮಧ್ಯ ಪ್ರದೇಶದ ದಮೋಹ್ ಕ್ಷೇತ್ರದಿಂದ ಪ್ರಹ್ಲಾದ್ ಸಿಂಗ್ ಪಟೇಲ್, ಬಿಹಾರದ ಆರಾ ಕ್ಷೇತ್ರದಿಂದ ರಾಜ್ಕುಮಾರ್ ಸಿಂಗ್, ರಾಜ್ಯ ಸಭಾ ಸದಸ್ಯರಾದ ಹರ್ದೀಪ್ ಸಿಂಗ್ ಪುರಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯ ಸಭಾ ಸದಸ್ಯರಾದ ಮನಸುಖ್ ಮಾಂಡವ್ಯ, ಮಧ್ಯ ಪ್ರದೇಶದ ಮಾಂಡ್ಲಾ ಕ್ಷೇತ್ರದಿಂದ ಫಗನ್ ಸಿಂಗ್ ಕುಲಸ್ತೆ, ಬಿಹಾರದ ಬಕ್ಸರ್ ಕ್ಷೇತ್ರದಿಂದ ಅಶ್ವಿನಿ ಚೌಬೆ, ಬಿಕನೇರ್ ಅರ್ಜುನ್ ರಾಮ್ ಮೇಘವಾಲ್, ಗಾಜಿಯಾಬಾದ್ ವಿ.ಕೆ.ಸಿಂಗ್, ಫರೀದಾಬಾದ್ನಿಂದ ಕೃಷ್ಣಪಾಲ್ ಗುರ್ಜರ್, ಮಹಾರಾಷ್ಟ್ರದ ಜಾಲ್ನಾದಿಂದ ರಾವ್ ಸಾಹೇಬ್ ದಾನಬೆ, ತೆಲಂಗಾಣದ ಸಿಕಂದರಾಬಾದ್, ರಾಜ್ಯ ಸಭಾ ಸದಸ್ಯರಾದ ಪುರುಷೋತ್ತಮ ರುಪಾಲಾ, ರಾಜ್ಯಸಭಾ ಸದಸ್ಯರಾದ ರಾಮದಾಸ್ ಅಠಾವಳೆ, ಫತೇಪುರ್ ಕ್ಷೇತ್ರದಿಂದ ಸಾಧ್ವಿ ನಿರಂಜನ್ ಜ್ಯೋತಿ, ಅಸನ್ ಜೋಲ್ ಕ್ಷೇತ್ರದಿಂದ ಬಾಬುಲ್ ಸುಪ್ರಿಯೋ, ಉತ್ತರ ಪ್ರದೇಶದ ಮುಜಾಫರ್ ನಗರದ ಸಂಜೀವ್ ಬಲಿಯಾನ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಮಹಾರಾಷ್ಟ್ರದ ಅಕೋಲಾ ಕ್ಷೇತ್ರದಿಂದ ಸಂಜಯ್ ಧೋತ್ರೆ, ಹಿಮಾಚಲ ಪ್ರದೇಶದ ಹಮೀರ್ ಪುರ ಕ್ಷೇತ್ರದಿಂದ ಅನುರಾಗ್ ಠಾಕೂರ್, ಬೆಳಗಾವಿಯಿಂದ ಸುರೇಶ್ ಅಂಗಡಿ, ಬಿಹಾರದ ಉಜಿಯಾರ್ ಪುರ ಕ್ಷೇತ್ರದಿಂದ ನಿತ್ಯಾನಂದ್ ರಾಯ್, ಹರ್ಯಾಣದ ಅಂಬಾಲಾದಿಂದ ರತನ್ ಲಾಲ್ ಕಟಾರಿಯಾ, ರಾಜ್ಯ ಸಭಾ ಸಂಸದರಾದ ವಿ.ಮುರಳೀಧರನ್, ಛತ್ತೀಸ್ಗಢದ ಸರ್ಗುವಾ ಕ್ಷೇತ್ರದಿಂದ ರೇಣುಕಾ ಸಿಂಗ್, ಪಂಜಾಬ್ನ ಹೋಶಿಯಾರ್ ಪುರ ಕ್ಷೇತ್ರದಿಂದ ಸೋಮ್ ಪ್ರಕಾಶ್, ಅಸ್ಸಾಂನ ದಿಬ್ರುಗಢದಿಂದ ರಾಮೇಶ್ವರ್ ತೇಲಿ, ಒಡಿಶಾದ ಪ್ರತಾಪ್ ಸಾರಂಗಿ, ಬಾಡಮೇರ್ ಕ್ಷೇತ್ರದಿಂದ ಕೈಲಾಶ್ ಚೌಧರಿ, ರಾಯಗಂಜ್ನಿಂದ ದೆಬೊಶ್ರೀ ಚೌಧರಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು.