ಬೆಂಗಳೂರು,ಮೇ 31(Daijiworld News/MSP): ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪಟ್ನಾ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಜನರೆಲ್ಲರೂ ದಿಕ್ಕಾಪಾಲಾಗಿ ಒಡಿದ ಘಟನೆ ನಡೆದಿದೆ.
ಒಂದನೇ ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ಎಕ್ಸ್ಪ್ರೆಸ್ ರೈಲು ಹೊರಡಲು ಸಿದ್ಧವಾಗಿರುವಾಗ ವ್ಯಕ್ತಿಯೊಬ್ಬರು ಬಾಂಬ್ ಇರುವುದಾಗಿ ಕೂಗಿಕೊಂಡರು. ಇದರಿಂದ ಅಕ್ಕಪಕ್ಕದ ಬೋಗಿಗಳಲ್ಲಿದ್ದ ಪ್ರಯಾಣಿಕರು ಭಯಗೊಂಡು ಕೆಳಗಿಳಿದು ಓಡಲಾರಂಭಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈಲ್ವೇ ಪೊಲೀಸರು ತೀವ್ರ ತಪಾಸಣೆ ಕೈಗೊಂಡರು.
ಆ ಬಳಿಕ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯದಳ ಅಧಿಕಾರಿಗಳು (ಆರ್ಎಎಫ್), ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗ್ರೆನೇಡ್ ಮಾದರಿಯ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದೆ. ಗ್ರೆನೇಡ್ ಮಾದರಿಯ ವಸ್ತು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು ಇದು ಕಂಟ್ರೀಮೇಡ್ ಗ್ರೇನೆಡ್ ಎಂದು ತಿಳಿದುಬಂದಿದೆ.
ಬೆಳಗ್ಗೆ 8. 45 ಕ್ಕೆ ರೈಲ್ಚೆ ನಿಲ್ದಾಣಕ್ಕೆ ಅಪರಿಚತ ವ್ಯಕ್ತಿ ಅನುಮಾನಸ್ಪದ ವಸ್ತು ಇಟ್ಟು ತೆರಳಿರುವ ಬಗ್ಗೆ ಬಗ್ಗೆ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.