ಬೆಂಗಳೂರು, ಸೆ.23(DaijiworldNews/AA): ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ 3 ಪ್ರಕರಣಗಳ ಕೇಸ್ ಫೈಲ್ ಅಧಿಕೃತವಾಗಿ ವಿಶೇಷ ತನಿಖಾ ತಂಡಕ್ಕೆ(ಎಸ್ಐಟಿ) ವರ್ಗಗೊಂಡಿದೆ.
ಪ್ರಕರಣಗಳು ಅಧಿಕೃತವಾಗಿ ಎಸ್ಐಟಿಗೆ ವರ್ಗಗೊಂಡ ಹಿನ್ನೆಲೆ ಬಿಕೆ ಸಿಂಗ್ ನೇತೃತ್ವದ ಎಸ್ಐಟಿ, ನ್ಯಾಯಾಂಗ ಬಂಧನದಲ್ಲಿರುವ ಮುನಿರತ್ನ ಅವರನ್ನು ಬಾಡಿವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಮುಂದಾಗಿದೆ. ಇಂದು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಗೆ ಈ ಸಂಬಂಧ ಎಸ್ಐಟಿ ಅರ್ಜಿ ಹಾಕಿಕೊಂಡಿದೆ. ಈ ಅರ್ಜಿ ವಿಚಾರಣೆ ಮಂಗಳವಾರ ನಡೆಯಲಿದೆ.
ಈ ನಡುವೆ ರೇಪ್ ಕೇಸ್ ಸಂಬಂಧ ಮುನಿರತ್ನ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಸೆ. 25ಕ್ಕೆ ಮುಂದೂಡಿಕೆಯಾಗಿದೆ. ಮುನಿರತ್ನ ಪ್ರಕರಣಗಳನ್ನು ಎಸ್ಐಟಿಗೆ ವಹಿಸಿರೋದನ್ನು ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.