ಹುಬ್ಬಳ್ಳಿ, ಸೆ.24(DaijiworldNews/TA):ಸಿಎಂ ಸಿದ್ದರಾಮಯ್ಯನವರು ಮೊಂಡುತನ ಬಿಟ್ಟು ರಾಜೀನಾಮೆ ನೀಡಲಿ ಎಂದು ಸಂಸದ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. ಇಂದು ನ್ಯಾಯಾಧೀಶರು ತೀರ್ಪು ಪ್ರಕಟ ಮಾಡಿ ಸಿಎಂ ರೀಟ್ ಅರ್ಜಿ ವಜಾ ಮಾಡಿದ್ದಾರೆ. ತೀರ್ಪಿನ ನಂತರ ಸಂಸದ ಜಗದೀಶ್ ಶೆಟ್ಟರ್ ಈ ಹೇಳಿಕೆ ನೀಡಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ನೇರ ಇನ್ವಾಲ್ಮೇಂಟ್ ಇದೆ. ಸಿಎಂ ಅವರ ಪತ್ನಿಯವರ ಇನ್ವಾಲ್ಮೇಂಟ್ ಇದೆ. ಸಿಎಂ ಅವರ ರೀಟ್ ಅರ್ಜಿ ವಜಾ ಆಗಿದೆ. ಹೈಕೋರ್ಟ್ ಆದೇಶದ ಪ್ರಕಟ ಹಿನ್ನೆಲೆ ಈಗ ತನಿಖೆ ಪ್ರಾರಂಭಿಸಬೇಕಾಗುತ್ತದೆ. ಸಿಎಂ ಸ್ಥಾನದಲ್ಲಿರುವವರ ಮೇಲೆ ಎಫಐಆರ್ ದಾಖಲು ಮಾಡಿ ತನಿಖೆ ಆಗಬೇಕಾಗುತ್ತದೆ. ಇಂತಹ ಸಮಯದಲ್ಲಿ ಸಿಎಂ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷದ ಒಬ್ಬ ಸಿಎಂ ವಿರುದ್ಧ ಎಫ್ಐಆರ್ ಆದಾಗ್ಯೂ ಹೈಕಮಾಂಡ್ ರಾಜೀನಾಮೆ ಕೇಳದಿದ್ದರೆ ಅವರ ಸಂದೇಶ ಏನು..? ಮುಡಾ ವಿಚಾರವನ್ನು ಕಾಂಗ್ರೆಸ್ ಹೈಲಮಾಂಡ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬುವುದಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.