ಬೆಂಗಳೂರು, ಸೆ.28(DaijiworldNews/AA): ಸಿಎಂ ಸಿದ್ದರಾಮಯ್ಯ ಎಫ್ಐಆರ್ ದಾಖಲಾದ ಬೆನ್ನಲ್ಲೇ ಮುಡಾ ಹಗರಣ ತನಿಖೆಗೆ ಲೋಕಾಯುಕ್ತ ಎಸ್ಪಿ 4 ತಂಡಗಳನ್ನು ರಚಿಸಿದ್ದಾರೆ.
ಪ್ರಕರಣ ಸಂಬಂಧ 3 ತಿಂಗಳೊಳಗೆ ಕೋರ್ಟ್ ಗೆ ತನಿಖಾ ವರದಿ ಸಲ್ಲಿಸಬೇಕಾಗಿದ್ದು, ಈ ಹಿನ್ನೆಲೆ ತನಿಖೆ ಸ್ವಲ್ಪ ಚುರುಕಾಗಿ ನಡೆಯುತ್ತಿದೆ. ಇನ್ನು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಎ-1 ಆರೋಪಿಯಾಗಿದ್ದು, ತನಿಖೆಯ ಟೆನ್ಷನ್ ಪ್ರಾರಂಭವಾಗಿದೆ.
ಇನ್ನು ಶನಿವಾರ - ಭಾನುವಾರ ಲೋಕಾಯುಕ್ತ ಕಚೇರಿಗೆ ರಜೆ ಇರುವ ಹಿನ್ನೆಲೆ ಸೋಮವಾರದಿಂದ ಅಧಿಕೃತ ತನಿಖೆ ಪ್ರಾರಂಭವಾಗಲಿದೆ. ಇದೀಗ ಎಫ್ಐಆರ್ ಆದ ಬೆನ್ನಲ್ಲೇ ತನಿಖೆಗೆ 4 ತಂಡಗಳನ್ನು ರಚಿಸಲಾಗಿದೆ.