ಹಾಸನ, ಅ.01(DaijiworldNews/AA): ಜಿಲ್ಲೆಯಲ್ಲಿ ಬೆಳೆ ನಷ್ಟಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿಯನ್ವಯ ಕಳೆದ 6 ತಿಂಗಳಿಂದ ಪರಿಹಾರ ನೀಡಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.
ಹಾಸನದಲ್ಲಿ ಇಂದು ಮಾತನಾಡಿದ ಅವರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ-ಎನ್ಡಿಆರ್ಎಫ್ ಅಡಿ ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಬೆಳೆ ನಷ್ಟಕ್ಕೆ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು. ಆದರೆ ಪರಿಹಾರವನ್ನು ನೀಡಿಲ್ಲ ಎಂದರು.
ಸರ್ಕಾರದ ಖಾತರಿ ಯೋಜನೆಗಳ ಅನುಷ್ಠಾನದಿಂದ ರೈತರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎನ್ನುವ ಮಾಹಿತಿಯನ್ನಾದರೂ ರೈತರಿಗೆ ನೀಡಿ ಎಂದು ಹೇಳಿದ ಅವರು, ಪರಿಹಾರ ನೀಡದೆ ಇರುವುದರಿಂದ ರೈತರು ತೊಂದರೆಗೆ ಸಿಲುಕಿದ್ದಾರೆ. ಕೃಷಿ ಇಲಾಖೆಯಲ್ಲಿ 444 ಹೆಕ್ಟರ್ ಪ್ರದೇಶದಲ್ಲಿ 86 ಕೋಟಿ ರೂಪಾಯಿ ನಷ್ಟವಾಗಿದೆ. 99 ಕೆರೆಗಳು ಅಸ್ಥಿತ್ವ ಕಳೆದುಕೊಂಡಿದೆ, 38 ಸೇತುವೆಗಳು ನೆಲಸಮಗೊಂಡಿವೆ. ಆದರೆ ರಾಜ್ಯ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಖಂಡನೀಯ ಎಂದು ಹೇಳಿದರು.