ತಿರುವನಂತಪುರಂ,ಜೂ. 01(DaijiworldNews/AZM): ಆಂಬುಲೆನ್ಸ್ ಚಾಲಕನೊಬ್ಬ ತಿರುವನಂತಪುರಂನಲ್ಲಿ ನರ್ಸ್ ಓರ್ವರ ಕಿವಿ ಕತ್ತರಿಸಿರುವ ಘಟನೆ ವರದಿಯಾಗಿದೆ.
ಆಂಬುಲೆನ್ಸ್ ಚಾಲಕನನ್ನು ನಿತಿನ್ ಎಂದು ಗುರತಿಸಲಾಗಿದೆ. ಈತ ನರ್ಸ್ ಮೇಲೆ ಹಲ್ಲೆ ನಡೆಸಿ ಹರಿತವಾದ ಆಯುಧದಿಂದ ಆಕೆಯ ಕಿವಿಯನ್ನು ಕತ್ತರಿಸಿದ್ದಾನೆ. ಗಸ್ತು ತಿರುಗುತ್ತಿದ್ದ ಪೊಲೀಸರು ಇದನ್ನು ನೋಡಿ ತಕ್ಷಣವೇ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ನರ್ಸ್ ಅನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಆಕೆಯ ಕಿವಿ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ನಿತಿನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಚಾಲಕ ಹಾಗೂ ನರ್ಸ್ ಮೊದಲಿನಿಂದಲೂ ಪರಿಚಯವಿತ್ತು ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಯಾವುದೋ ಹಳೆಯ ದ್ವೇಷಕ್ಕೆ ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.