ನವದೆಹಲಿ,ಅ.02(DaijiworldNews/TA):ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ತಾಯಿ ಸರೋಜ್ ದೇವಿ ಅವರಿಗೆ ಪತ್ರ ಬರೆದಿದ್ದಾರೆ, ಅವರು ಮಾಡಿದ ಚುರ್ಮಾ ಸಿಹಿತಿಂಡಿಗೆ ಧನ್ಯವಾದ ಅರ್ಪಿಸಿದ್ದಾರೆ.
ಬುಧವಾರ ನೀರಜ್ ಚೋಪ್ರಾ ಅವರ ತಾಯಿ ಮಾಡಿದ ಚುರ್ಮಾ ಸಿಹಿ ತಿಂಡಿಯನ್ನು ಪ್ರಧಾನಿ ಮೋದಿಗೆ ನೀಡಿದ್ದರು. ನಾನು ಹಾಗೂ ನೀರಜ್ ಆಗಾಗ್ಗೆ ಚುರ್ಮಾ ಬಗ್ಗೆ ಚರ್ಚಿಸುತ್ತೇವೆ. ಆದರೆ ಅದನ್ನು ಸೇವಿಸಿದ ನಂತರ ನಾನು ಭಾವುಕನಾಗಿದ್ದೇನೆ. ಈ ಪ್ರೀತಿ ತುಂಬಿದ ಉಡುಗೊರೆ ನನಗೆ ನನ್ನ ತಾಯಿ ನೆನಪಾದರು ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಹಿಂದೂ ಸಂಸ್ಕೃತಿಯಲ್ಲಿ ಶ್ರದ್ಧಾಭಕ್ತಿಯ ಸಮಯವಾದ ನವರಾತ್ರಿ ಹಬ್ಬದ ಮುನ್ನವೇ ಸತ್ಕಾರವನ್ನು ಸ್ವೀಕರಿಸುವುದು ವಿಶೇಷವಾಗಿದೆ ಎಂದು ಪ್ರಧಾನಿ ಮೋದಿ ವ್ಯಕ್ತಪಡಿಸಿದರು.
ನವರಾತ್ರಿಯ ಈ 9 ದಿನಗಳಲ್ಲಿ ನಾನು ಉಪವಾಸ ಮಾಡುತ್ತೇನೆ, ಒಂದು ರೀತಿಯಲ್ಲಿ, ನನ್ನ ಉಪವಾಸದ ಮೊದಲು, ನಿಮ್ಮ ಚುರ್ಮಾ ನನ್ನ ಮುಖ್ಯ ಆಹಾರವಾಗಿದೆ. ನೀವು ತಯಾರಿಸುವ ಆಹಾರವು ಸಹೋದರ ನೀರಜ್ಗೆ ದೇಶಕ್ಕಾಗಿ ಪದಕಗಳನ್ನು ಗೆಲ್ಲುವ ಶಕ್ತಿಯನ್ನು ನೀಡುವಂತೆ, ಈ ಚುರ್ಮಾ ನನಗೆ ನೀಡುತ್ತದೆ. ಎಂದು ಚುರ್ಮಾ ಸೇವಿಸಿದ ಪ್ರಧಾನಿ ವಿಶೇಷ ಪತ್ರದ ಮೂಲಕ ಚೋಪ್ರಾ ಅವರ ತಾಯಿ ಸರೋಜ್ ದೇವಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.