ಬೆಂಗಳೂರು, ಅ.05(DaijiworldNews/AA): ಈರುಳ್ಳಿ, ಬೆಳ್ಳುಳ್ಳಿ ದರ ಏರಿಕೆ ಬೆನ್ನಲ್ಲೇ ಇದೀಗ ಟೊಮೆಟೊ ದರ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಬರೆ ಎಳೆದಂತಾಗಿದೆ.
ಕಳೆದ ಒಂದು ವಾರದ ಹಿಂದೆ ಟೊಮೆಟೊ ಕೆಜಿಗೆ 40 ರೂ. ಇದ್ದ ದರ ಇದೀಗ ಎರಡು ಪಟ್ಟು ಏರಿಕೆಕಂಡಿದೆ. ಅ.4ರಿಂದ ಟೊಮೆಟೊವು ಕೆಜಿಗೆ 80 ರೂ.ಯಂತೆ ಮಾರಾಟವಾಗುತ್ತಿದೆ.
ಅಕಾಲಿಕ ಮಳೆಯಿಂದ ಟೊಮೆಟೊ ಇಳುವರಿ ಕಡಿಮೆಯಾಗಿದೆ. ಇದೇ ವೇಳೆಯಲ್ಲಿ ನವರಾತ್ರಿ ಹಬ್ಬವೂ ಆರಂಭಗೊಂಡಿದ್ದು, ಟೊಮೆಟೊ ಬೇಡಿಕೆ ಹೆಚ್ಚಾಗಿದೆ. ಟೊಮೆಟೊ ಪೂರೈಕೆ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಟೊಮೆಟೊ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಇನ್ನು ಅಕಾಲಿಕ ಮಳೆಯಿಂದಾಗಿ 1 ಕೆಜಿ ಈರುಳ್ಳಿ ಬೆಲೆ 70 ರೂ. ದಾಟಿದ್ದು, 1 ಕೆಜಿ ಬೆಳ್ಳುಳ್ಳಿ ಬೆಲೆ 500 ರೂ. ತಲುಪಿದೆ. ಇದರ ಬೆನ್ನಲ್ಲೇ ಇದೀಗ ಟೊಮೆಟೊ ಬೆಲೆ ಏರಿಕೆಯಾಗಿದ್ದು, ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.