ದೆಹಲಿ, ಅ.05(DaijiworldNews/AK): ಹರ್ಯಾಣದಲ್ಲಿ ಕಾಂಗ್ರೆಸ್ ಪಕ್ಷವು ಸುಮಾರು 57 ಸ್ಥಾನಗಳನ್ನು ಗಳಿಸಲಿದೆ ಎಂದು ಚುನಾವಣಾ ಸಮೀಕ್ಷೆ ಭವಿಷ್ಯ ನುಡಿದಿದೆ.
ಬಿಜೆಪಿ 14 ಸ್ಥಾನಗಳನ್ನು, ಐಎನ್ಎಲ್ಡಿ 4 ಸ್ಥಾನಗಳನ್ನು ಮತ್ತು ಇತರರು ಸುಮಾರು 15 ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಹೇಳಿವೆ. ಮ್ಯಾಟ್ರಿಜ್ ಪ್ರಕಾರ, ಕಾಂಗ್ರೆಸ್ 55-62, ಬಿಜೆಪಿ 18-24, ಐಎನ್ಎಲ್ಡಿ 3-6, ಜೆಜೆಪಿ 0-3 ಮತ್ತು ಇತರರು 2-5 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಕಾಂಗ್ರೆಸ್ 49-61 ಸ್ಥಾನ, ಬಿಜೆಪಿ 20-32, ಐಎನ್ಎಲ್ಡಿ 2-3, ಜೆಜೆಪಿ 0-1 ಮತ್ತು ಇತರರು 3-5 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಪೀಪಲ್ಸ್ ಪಲ್ಸ್ ಭವಿಷ್ಯ ನುಡಿದಿದೆ.ಕಾಂಗ್ರೆಸ್ 50-64, ಬಿಜೆಪಿ 22-32 ಮತ್ತು ಇತರರು 2-8 ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಧ್ರುವ್ ರಿಸರ್ಚ್ ಭವಿಷ್ಯ ನುಡಿದಿದೆ. ದೈನಿಕ್ ಭಾಸ್ಕರ್, ಕಾಂಗ್ರೆಸ್ 44-54, ಬಿಜೆಪಿ 15-29, ಜೆಜೆಪಿ 0-1, ಐಎನ್ಎಲ್ಡಿ 1-5, ಎಎಪಿ 0-1 ಮತ್ತು ಇತರ 4-9 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.
ಹರ್ಯಾಣದ 90 ಸ್ಥಾನಗಳಿಗೆ ಅಕ್ಟೋಬರ್ 5 ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಬಹುಮತಕ್ಕೆ 46 ಸ್ಥಾನಗಳು ಬೇಕಿದ್ದು, . ಹರ್ಯಾಣ ವಿಧಾನಸಭಾ ಚುನಾವಣೆಯ ಮತದಾನ ಸಂಜೆ 6 ಗಂಟೆ ಸುಮಾರಿಗೆ ಮುಕ್ತಾಯವಾದ ಕೆಲವೇ ಹೊತ್ತಿನಲ್ಲಿ ಎಕ್ಸಿಟ್ ಪೋಲ್ಗಳನ್ನು ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 8 ರಂದು ಚುನಾವಣಾ ಆಯೋಗವು ಅಧಿಕೃತವಾಗಿ ಫಲಿತಾಂಶಗಳನ್ನು ಪ್ರಕಟಿಸಲಿದೆ.