ತಿರುವನಂತಪುರ, ಜೂ01(Daijiworld News/SS): ಕೆಲವು ದಿನಗಳ ಹಿಂದೆ ಕೇರಳದ ವಯನಾಡು ಸಂಸದರಾದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಲೋಕಸಭಾ ಕ್ಷೇತ್ರದ ರೈತ ದಿನೇಶ್ ಕುಮಾರ್ ಆತ್ಮಹತ್ಯೆ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು.
ಇದೀಗ ರಾಹುಲ್ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, ರೈತರ ಆತ್ಮಹತ್ಯೆ ಕುರಿತು ಶೀಘ್ರವೇ ತನಿಖೆ ಮಾಡುವುದಾಗಿ ಹೇಳಿದ್ದಾರೆ. ಮಾತ್ರವಲ್ಲ, ರೈತರು ಒಂದು ವರ್ಷದ ಅವಧಿಯವರೆಗೆ ಬ್ಯಾಂಕಿನ ಬೆಳೆ ಸಾಲವನ್ನಾಗಲಿ, ಇತರೆ ಸಾಲವಾಗಲಿ ಹಾಗೂ ಬಡ್ಡಿಯನ್ನಾಗಲಿ ತೀರಿಸುವಂತಿಲ್ಲ ಎಂದು ಕೇರಳ ಸಿಎಂ ಪ್ರಕಟಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ರೈತ ವಿ.ಡಿ.ದಿನೇಶ್ ಕುಮಾರ್ ಸಾವಿನ ಕುರಿತು ತನಿಖೆ ನಡೆಸುವಂತೆ ಡಿಸಿ ಅವರಿಗೆ ಆದೇಶಿಸಲಾಗಿದೆ. ವಾಣಿಜ್ಯ ಬ್ಯಾಂಕುಗಳಿನ ರೈತರ ಸಾಲದ ವಿಷಯವನ್ನು ಕೇಂದ್ರ ಸರ್ಕಾರವೇ ನಿರ್ವಹಿಸಬೇಕಿದೆ. ಹಾಗಾಗಿ ಈ ಬಗ್ಗೆ ಲೋಕಸಭೆಯಲ್ಲಿ ಧನಿ ಎತ್ತುವ ಅವಶ್ಯಕತೆ ಇದ್ದು, ತಾವುಗಳೂ ಸಹ ಈ ಚಳವಳಿಯಲ್ಲಿ ಭಾಗಿಯಾಗಬೇಕು ಎಂದು ಪಿಣರಾಯಿ ವಿಜಯನ್ ಅವರು ರಾಹುಲ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ರಾಹುಲ್ ಅವರ ಪತ್ರದಿಂದ ಕೇರಳದ ರೈತರಿಗೆ ಸಾಲದಿಂದ ತಾತ್ಕಾಲಿಕ ವಿಮುಕ್ತಿ ಸಿಕ್ಕಂತಾಗಿದೆ.