ಬೆಂಗಳೂರು,ಅ.08(DaijiworldNews/AK): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಇಂದು ಕೂಡ ಜಾಮೀನು ಸಿಕ್ಕಿಲ್ಲ.. ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಬುಧವಾರಕ್ಕೆ ಮುಂದೂಡಿದೆ.
57ನೇ ಸಿಸಿಹೆಚ್ ಕೋರ್ಟ್ನಲ್ಲಿ ಮಂಗಳವಾರ ವಿಚಾರಣೆ ನಡೆಯಿತು. ಆಕ್ಷೇಪಣಾ ವಾದವನ್ನು ಎಸ್ಪಿಪಿ ಪ್ರಸನ್ನಕುಮಾರ್ ಮಂಡಿಸಿದರು. ಪವಿತ್ರಗೌಡ, ದರ್ಶನ್ ಮತ್ತು ರವಿಶಂಕರ್ ಪಾತ್ರದ ಬಗ್ಗೆ ವಾದ ಮಂಡನೆ ಮಾಡಿದರು.
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಓದಿದ ಎಸ್ಪಿಪಿ, ಬಲ ಭಾಗದಲ್ಲಿ ರೇಣುಕಾಸ್ವಾಮಿ ಪಕ್ಕೆಲುಬು ಮುರಿದು ಶ್ವಾಸಕೋಶಕ್ಕೆ ಚುಚ್ಚಿದೆ. ಎಡಭಾಗದಲ್ಲಿ ಕೂಡ ಪಕ್ಕೆಲುಬುಗಳು ಮುರಿದಿದೆ. 17 ಬಲವಾದ ಪೆಟ್ಟುಗಳು ಶ್ವಾಸಕೋಶ, ಪಕ್ಕೆಲುಬುಗಳ ಬಳಿಯೇ ಬಿದ್ದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಉತ್ತರ ಬಂದಿದೆ.