ಲಖನೌ, ಜೂ01(Daijiworld News/SS): ಸರ್ಕಾರಿ ಅಧಿಕಾರಿಗಳ ಸಭೆ ಮತ್ತು ಕ್ಯಾಬಿನೆಟ್ ಮಿಟಿಂಗ್ಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ನಿಷೇಧಿಸಿದ್ದಾರೆ.
ಮುಖ್ಯಮಂತ್ರಿಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಈ ಸೂಚನೆಯನ್ನು ನೀಡಿದ್ದು, ಸಭೆಗಳಲ್ಲಿ ಪಾಲ್ಗೊಳ್ಳುವವರ ಗಮನ ಅತ್ತಇತ್ತ ಸರಿಯಬಾರದು. ಚರ್ಚೆ ನಡೆಯುವ ವೇಳೆ ಕೆಲ ಸಚಿವರು ವಾಟ್ಸ್ಆ್ಯಪ್ ಮೆಸೇಜ್ಗಳನ್ನು ಓದುವುದರಲ್ಲಿ ತಲ್ಲೀನರಾಗುತ್ತಾರೆ. ಇದು ಚರ್ಚೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಮನಗಂಡು ಮುಖ್ಯಮಂತ್ರಿ ಮೊಬೈಲ್ ನಿಷೇಧದ ನಿರ್ಧಾರ ತೆಗೆದುಕೊಂಡರು ಎಂದು ಹೇಳಿದ್ದಾರೆ.
ಈ ತೀರ್ಮಾನದಿಂದಾಗಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿ ಕದ್ದಾಲಿಸುವ ಸಾಧ್ಯತೆ ಇಲ್ಲವಾಗಿದೆ. ಈ ಮೊದಲು ಸಚಿವರಿಗೆ ಮೊಬೈಲ್ ಪೊನ್ ಅನ್ನು ಸೈಲೆಂಟ್ ಮೊಡ್ನಲ್ಲಿ ತರಲು ಅನುಮತಿ ನೀಡಲಾಗಿತ್ತು. ಇದೀಗ ಉತ್ತರ ಪ್ರದೇಶದಲ್ಲಿ ಸಚಿವರು ಮೊಬೈಲ್ ಇಡಲು ಕೌಂಟರ್ ಮತ್ತು ಟೋಕನ್ ವ್ಯವಸ್ಥೆಯನ್ನು ಮಾಡಲಾಗಿದೆ.