ಬೆಂಗಳೂರು, ಅ. 09(DaijiworldNews/TA): ಸೋಶಿಯಲ್ ಮೀಡಿಯಾದಲ್ಲಿ ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಟ್ವೀಟ್ ವಾರ್ ತಾರಕಕ್ಕೇರಿದೆ. ಜೆಡಿಎಸ್ ನಾಯಕನ ಬಗ್ಗೆ ಕಾಂಗ್ರೆಸ್ ಆರೋಪಗಳನ್ನು ಮಾಡುತ್ತಿದ್ದರೆ ಅದಕ್ಕೆ ಪ್ರತಿಯಾಗಿ ಜೆಡಿಎಸ್ ಕೂಡ ಕಾಂಗ್ರೆಸ್ ನಾಯಕನ ಬಗ್ಗೆ ಗಂಭೀರ ಆರೋಪಗಳನ್ನು ಮಾಡಲಾರಂಭಿಸಿದೆ.
ಮೊದಲಿಗೆ ಜೆಡಿಎಸ್, 'ಕಲೆಕ್ಷನ್ ಅಧ್ಯಕ್ಷನ ಪರ್ಸಂಟೇಜ್ ಪುರಾಣ ಎಂದು ಶೀರ್ಷಿಕೆ ನೀಡಿ ವಾಗ್ದಾಳಿ ನಡೆಸಿತ್ತು. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್, 'ಕುಮಾರಸ್ವಾಮಿ ಅವರ ಪುರಾಣವನ್ನು ಜನತಾ ದಳ ಪಕ್ಷದವರೇ ಬಿಚ್ಚಿಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ?' ಎಂದು ಪ್ರಶ್ನೆ ಮಾಡಿತ್ತು.
ಸ್ವತಃ ಡಿ.ಕೆ. ಶಿವಕುಮಾರ್ ಅವರು ನೀವು ಮಾಡಿರುವ ಆರೋಪಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಮಾಡಲು ಆಹ್ವಾನಿಸಿದ್ದಾರೆ. ಆ ಮೂಲಕ ತಮ್ಮ ಪೌರುಷವನ್ನು ಸಾಬೀತುಪಡಿಸಿದ್ದಾರೆ' ಸ್ವತಃ ಡಿ.ಕೆ. ಶಿವಕುಮಾರ್ ಅವರು ನೀವು ಮಾಡಿರುವ ಆರೋಪಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಮಾಡಲು ಆಹ್ವಾನಿಸಿದ್ದಾರೆ. ಆ ಮೂಲಕ ತಮ್ಮ ಪೌರುಷವನ್ನು ಸಾಬೀತುಪಡಿಸಿದ್ದಾರೆ' ಎಂದು ಹೇಳಿತ್ತು.
'ಈ ಆಹ್ವಾನ ಸ್ವೀಕರಿಸದೇ ವಿಧಾನಸಭೆ ಬಿಟ್ಟು ಹೋಗಿದ್ದು ನೀವು. ಈಗ ಹೇಳಿ ಶಿಖಂಡಿ, ನಪುಂಸಕ, ರಣಹೇಡಿ ಯಾರು? ಎಂದು ಪ್ರಶ್ನೆ ಮಾಡಿತ್ತು. ಅಂದಹಾಗೆ, ವೆಸ್ಟ್ ಎಂಡ್ ಹೋಟೆಲ್ನಲ್ಲಿ ರಾಸಲೀಲೆ ನಡೆಸುವುದು, ಅಮಾಯಕ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದನ್ನೇ ಪೌರುಷ ಎಂದು ಭಾವಿಸಿರುವ ನೀವು, ಡಿ.ಕೆ.ಶಿವಕುಮಾರ ಅವರಂತೆ ನೇರ ಹೋರಾಟ ಮಾಡುವ ಮೂಲಕ ನಿಮ್ಮ ಪೌರುಷ ಸಾಬೀತುಪಡಿಸಿ' ಎಂದು ಸವಾಲು ಹಾಕಿತ್ತು.
ಇದಕ್ಕೆ ಪ್ರತಿದಾಳಿ ಎಂಬಂತೆ ಕಾಂಗ್ರೆಸ್ ಟ್ವೀಟ್ಗೆ ಪ್ರತಿಯಾಗಿ ಜೆಡಿಎಸ್ ಕೂಡ ಟ್ವೀಟ್ನಲ್ಲಿ ಕೌಂಟರ್ ಕೊಟ್ಟಿದೆ. 'ಈಗಲೂ ಕಲೆಕ್ಷನ್ ಗಿರಾಕಿ, ಆ ಶಿಖಂಡಿ, ನಪುಂಸಕ, ರಣಹೇಡಿ, ಮಾನಗೇಡಿಯನ್ನು ಸಮರ್ಥಿಸಿಕೊಳ್ಳುತ್ತೀರಾ? ನಿಮಗೆ ನಾಚಿಕೆಯಾಗಲ್ವಾ..?' ಎಂದು ಡಿ.ಕೆ.ಶಿವಕುಮಾರ್ ವಿಚಾರವಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದೆ.
'ತಿಹಾರ್ ಜೈಲು ಹಕ್ಕಿ, ಸಿಡಿ ಶಿವು, ಗ್ರಾನೈಟ್-ಹವಾಲಾ ದಂಧೆಕೋರನ ಪೌರುಷದ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಬೇರೆ ಕೇಡು.. ಎಂಥಹ ಭಂಡಬಾಳು ಥೂ ಅಸಹ್ಯ ' ಎಂದು ಏಕವಚನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ.