ಬೆಂಗಳೂರು, ಅ.09(DaijiworldNews/AK):ಭಾರತದ ಪ್ರವಾಸದಲ್ಲಿರುವ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ನೇತೃತ್ವದ ನಿಯೋಗ ಕರ್ನಾಟಕಕ್ಕೆ ಭೇಟಿ ನೀಡಿ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಈ ಸಂದರ್ಭ ದಲ್ಲಿ ಮಾತನಾಡಿದ ರಾಜ್ಯಪಾಲ ಗೆಹಲೋತ್ ಅವರು, ಮಾಲ್ದೀವ್ಸ್ನ ಅಡ್ಡುವಿನಲ್ಲಿ ಭಾರತೀಯ ದೂತಾವಾಸ ಮತ್ತು ಬೆಂಗಳೂರಿನಲ್ಲಿ ಮಾಲ್ದೀವ್ಸ್ ದೂತಾವಾಸ ತೆರೆಯುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಿದರು.
ದೂತಾವಾಸ ಸ್ಥಾಪನೆ ವಿಚಾರ ಶೀಘ್ರದಲ್ಲೇ ಕಾರ್ಯ ರೂಪಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ. ಇದು ಭಾರತೀಯರಿಗೆ ಮಾಲ್ದೀ ವ್ಸ್ಗೆ ಭೇಟಿ ನೀಡಲು ಮತ್ತು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಹಾಯ ಆಗುತ್ತದೆ. ಬೆಂಗಳೂರು ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೇಂದ್ರವಾಗಿದೆ.ಮಾಲ್ದೀವ್ಸ್ ಜನರ ಪ್ರಗತಿಗೆ ಸಾಧ್ಯವಿರುವ ಎಲ್ಲ ನೇರವನ್ನೂ ನೀಡುತ್ತೇವೆ’ ಎಂದು ಅವರು ಹೇಳಿದರು.
ಮುಖ್ಯಮಂ ತ್ರಿ ಸಿದ್ದರಾಮಯ್ಯ ಮಾತನಾಡಿ,ಮಾಲ್ದೀ ವ್ಸ್ನಲ್ಲಿ ಮಾಹಿತಿ ತಂ ತ್ರಜ್ಞಾನ ಉದ್ಯಮದ ಬೆಳವಣಿಗೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು.ಬೆಂಗಳೂರಿನ ಪ್ರಮುಖ ಐ.ಟಿ ಉದ್ಯಮಗಳೊಂದಿಗೆ ಸಹಭಾಗಿತ್ವ ಹೊಂದಲು ಆಸಕ್ತಿ ವ್ಯಕ್ತಪಡಿಸಿರುವುದಾಗಿ ಗೊತ್ತಾಗಿದೆ ಎಂದರು.
ಮೊಹಮ್ಮದ್ ಮುಯಿಜುಮಾತನಾಡಿ, ಭಾರತದಲ್ಲಿ ಬಹಳ ಹೆಸರು ಮಾಡಿರುವ ಕರ್ನಾ ಟಕ ರಾಜ್ಯಕ್ಕೆ ಅದರಲ್ಲೂ ಬೆಂಗಳೂರಿಗೆ ಭೇಟಿ ನೀ ಡಿರುವುದು ಬಹಳ ಸಂತಸವಾಗಿದೆ. ಮಾಲ್ದೀವ್ಸ್ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಸಹಕಾರ ನೀಡಲಾಗುವುದು ಎಂದು ಹೇಳಿದರು.