ಮಡಿಕೇರಿ,ಅ. 11(DaijiworldNews/AK): ಜಾತಿಗಣತಿ ಬಗ್ಗೆ ಮೊದಲು ತಮ್ಮ ನಿಲುವು ಏನೆಂದು ಬಿಜೆಪಿಯವರು ತಿಳಿಸಲಿ, ಆಮೇಲೆ ಸರ್ಕಾರದ ನಿಲುವನ್ನು ಪ್ರಕಟಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಜಾತಿಗಣತಿ ಬಗ್ಗೆ ಬಿಜೆಪಿ ಹೇಳಿರುವುದಕ್ಕೂ ಶಿವಕುಮಾರ್ ಅವರು, ತಮ್ಮ ಸರ್ಕಾರದ ನಿಲುವನ್ನು ಹೇಳಲಿಲ್ಲ. ಮೊದಲು ತಮ್ಮ ನಿಲುವು ಏನೆಂದು ಬಿಜೆಪಿಯವರು ತಿಳಿಸಲಿ, ಆಮೇಲೆ ಸರ್ಕಾರದ ನಿಲುವನ್ನು ಪ್ರಕಟಿಸುತ್ತೇವೆ ಎಂದು ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು , ಹೆಚ್ ಡಿ ಕುಮಾರಸ್ವಾಮಿಯವರ ಕಾಮೆಂಟ್ಗೆ ಉತ್ತರಿಸಲಿಲ್ಲ. ಸರ್ಕಾರವನ್ನು ಬೇರೆ ಯಾರೂ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿಲ್ಲ, ಕಾಂಗ್ರೆಸ್ ನಾಯಕರೇ ಆ ಕಾರ್ಯದಲ್ಲಿ ತೊಡಗಿದ್ದಾರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆಂದು ಶಿವಕುಮಾರ್ಗೆ ತಿಳಿಸಿದಾಗ, ಕುಮಾರಸ್ವಾಮಿ ಮಾತಿಗೆ ಮತ್ತೊಂದು ದಿನ ಉತ್ತರಿಸುವೆ, ದುಷ್ಟರನ್ನು ಮತ್ತು ದುಃಖವನ್ನು ದೂರ ಮಾಡುವ ದುರ್ಗಾದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು.