ನವದೆಹಲಿ,ಜೂ02(DaijiworldNews/AZM):ಈ ಬಾರಿ ಮುಂಗಾರು ರಾಜ್ಯಕ್ಕೆ ಜೂ.9-10ಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಈ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ಹವಾಮಾನ ಇಲಾಖೆ, ಸಾಮಾನ್ಯವಾಗಿ ಜೂನ್.1ಕ್ಕೆ ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶ ಮಾಡಬೇಕಿತ್ತು. ಆದರೇ ಈ ವರ್ಷ ಒಂದು ವಾರಗಳ ಕಾಲ ವಿಳಂಬ ಹೊಂದಿ, ಜೂನ್.6ಕ್ಕೆ ಪ್ರವೇಶ ಮಾಡಲಿದೆ ಎಂದು ಹೇಳಿದೆ.
ಜೂನ್.6ಕ್ಕೆ ಕೇರಳವನ್ನು ಪ್ರವೇಶಿಸಲಿರುವ ಮುಂಗಾರು ಮಾರುತಗಳು, ಮಳೆಯನ್ನು ತಂದು ಕೊಡಲಿವೆ. ಒಡಿಶಾಗೆ ಎರಡು ವಾರಗಳ ನಂತ್ರ ತಲುಪಲಿವೆ. ಇದೇ ಮುಂಗಾರು ಮಳೆ ಕರ್ನಾಟಕವನ್ನು ಜೂನ್.9-10ರಂದು ಪ್ರವೇಶಿಸುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ಅಂದಹಾಗೇ ಈ ಬಾರಿಯ ಮುಂಗಾರು ಮಳೆ ಒಂದು ವಾರ ತಡವಾಗಿ, ರೈತರ ಕೃಷಿ ಕೆಲಸಕ್ಕೆ ತಡವಾದರೇ, ಇಡೀ ದೇಶದಾದ್ಯಂತ ಮುಂಗಾರು ಮಳೆ ವಾಡಿಕೆಗಿಂತ ಅಷ್ಟೇನು ಹೆಚ್ಚು ಆಗುವುದಿಲ್ಲ. ಈ ಬಾರಿ ಮಳೆಯ ಪ್ರಮಾಣ ಸಾಮಾನ್ಯಾವಗಿ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.