ಬೆಂಗಳೂರು,ಜೂ02(DaijiworldNews/AZM):ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ,ಮೋದಿ ಹಾಗೂ ಬಿಜೆಪಿಯ ವಿರುದ್ಧ ಟ್ವೀಟ್ ಮಾಡುತ್ತಿದ್ದ ಕಾಂಗ್ರೆಸ್ ಸಾಮಾಜಿಕ ಜಾಲ ತಾಣ ಮುಖ್ಯಸ್ಥೆ ರಮ್ಯಾ ಅವರ ಟ್ವಿಟ್ಟರ್ ಖಾತೆಯಲ್ಲಿನ ಎಲ್ಲಾ ಟ್ವಿಟ್ ಡಿಲೀಟ್ ಆಗಿದ್ದು, ಖಾತೆ ನಿಷ್ಕ್ರಿಯಾ(ಡಿಯಾಕ್ಟಿವೇಟ್) ಮಾಡಲಾಗಿದೆ.
ರಮ್ಯಾ(ದಿವ್ಯಸ್ಪಂದನ) ಅವರ ಖಾತೆ ಹುಡುಕಿದರೂ ಸಿಗುತ್ತಿಲ್ಲ. ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದು, ಮೋದಿ ಹಾಗೂ ಈ ಹಿಂದಿನ ಮೋದಿ ಸರ್ಕಾರದ ವಿರುದ್ಧ ನಿರಂತವಾರಿ ವೈಯಕ್ತಿಕ ದಾಳಿ ನಡೆಸುತ್ತಾ ಬಂದಿದ್ದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 52 ಸ್ಥಾನ ಮಾತ್ರ ಗಳಿಸಿ ಸೋಲೋಪ್ಪಿಕೊಂಡ ಬಳಿಕ, ರಮ್ಯಾ ಅವರ ಟ್ವಿಟ್ಟರ್ ಖಾತೆ ಅಷ್ಟು ಸಕ್ರಿಯವಾಗಿರಲಿಲ್ಲ.
ಸದ್ಯ ರಮ್ಯಾ ಖಾತೆ ಸಿಗುತ್ತಿಲ್ಲ, ರಮ್ಯಾ ಖಾತೆಯಲ್ಲಿ ಶೂನ್ಯ ಸಂದೇಶ, ಶೂನ್ಯ ಹಿಂಬಾಲಕರು ಎಂಬ ಸ್ಕ್ರೀನ್ ಶಾಟ್ ಗಳು ಹಂಚಿಕೆಯಾಗುತ್ತಿವೆ. ಯಾವ ಕಾರಣದಿಂದಾಗಿ ಸಂದೇಶಗಳನ್ನು ಅಳಿಸಿಹಾಕಿದ್ದಾರೆ, ಇದೇನು ಉದ್ದೇಶಿತ ಕೃತ್ಯವೇ ಅಥವಾ ತಾಂತ್ರಿಕ ದೋಷವೇ ಏನು ಸ್ಪಷ್ಟನೆ ಇಲ್ಲ. ರಮ್ಯಾ ಅವರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ.