ವಿಜಯಪುರ, ಅ.14(DaijiworldNews/AA): ದೂರುದಾರ ಸ್ನೇಹಮಯಿ ಕೃಷ್ಣಗೆ ರಕ್ಷಣೆ ನೀಡಲು ನಾವು ಬದ್ಧ ಎಂದು ಸಚಿವ ಎಂ.ಬಿ ಪಾಟೀಲ ತಿಳಿಸಿದರು.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರನ್ನು ಬಂಧಿಸಲು ಸ್ನೇಹಮಯಿ ಕೃಷ್ಣ ಆಗ್ರಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಂಧನ ಯಾಕೆ ಆಗಬೇಕು. ದೂರುದಾರರಿಗೆ ರಕ್ಷಣೆ ನೀಡಲು ನಮ್ಮಲ್ಲಿ ಇದ್ದಾರೆ. ಆ ರೀತಿ ಸಿದ್ದರಾಮಯ್ಯ ಆಗಲಿ ಅಥವಾ ಬೇರೆಯಾರೇ ಆಗಲಿ ನಮ್ಮಲ್ಲಿ ಮಾಡುವುದಿಲ್ಲ. ನಿರ್ಭೀತಿಯಿಂದ ಅವರು ಇರಬಹುದು ಎಂದರು.
ಇದೇ ವೇಳೆ ಖರ್ಗೆ ಕುಟುಂಬ ಸಿಎ ಸೈಟ್ ವಾಪಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ದೇಶದಲ್ಲಿ ಇರಲಿಲ್ಲ. ಬೆಂಗಳೂರಿಗೆ ಹೋಗಿಲ್ಲ. ಸಿದ್ದಾರ್ಥ ವಿಹಾರ ಟ್ರಸ್ಟ್ನ ಸಿಎ ಸೈಟ್ ವಾಪಸ್ ನೀಡಿದ್ದರ ಬಗ್ಗೆ ನನಗೆ ಗೊತ್ತಿಲ್ಲ, ನಾನು ಅಮೇರಿಕಾದಿಂದ ನೇರವಾಗಿ ವಿಜಯಪುರ ಬಂದಿದ್ದೇನೆ. ನಾನು ಬೆಂಗಳೂರು ಹೋದ ನಂತರ ನೋಡುತ್ತೇನೆ. ಗೊತ್ತಿರದ ವಿಷಯದ ಕುರಿತು ನಾನು ಹೇಗೆ ಮಾತನಾಡಲಿ ಎಂದು ಪ್ರಶ್ನೆ ಮಾಡಿದ್ದಾರೆ.