ದೆಹಲಿ, ಅ.13(DaijiworldNews/AK):ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಎಸ್ಸಿಒ ಶೃಂಗಸಭೆಗಾಗಿ ಮಂಗಳವಾರ ಸಂಜೆ ಪಾಕಿಸ್ತಾನಕ್ಕೆ ಆಗಮಿಸಲಿದ್ದು, ಪ್ರತಿನಿಧಿಗಳಿಗೆ ಪ್ರಧಾನಿ ಶೆಹಬಾಜ್ ಷರೀಫ್ಆಯೋಜಿಸುವ ಸ್ವಾಗತ ಔತಣಕೂಟದಲ್ಲಿ ಭಾಗವಹಿಸಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಶೃಂಗಸಭೆಯಲ್ಲಿ ಔಪಚಾರಿಕ ದ್ವಿಪಕ್ಷೀಯ ಸಭೆಯ ನಿರೀಕ್ಷೆಯನ್ನು ಎರಡೂ ಪಕ್ಷಗಳು ಹೊರಗಿಟ್ಟಿದ್ದರೂ, ಬುಧವಾರದ ಮುಖ್ಯ ಶೃಂಗಸಭೆಗೆ ಮುಂಚಿತವಾಗಿ ಸಚಿವರು ಭೋಜನಕ್ಕೆ ಸೇರಲು ಮತ್ತು ಆತಿಥೇಯ ಶೆಹಬಾಜ್ ಷರೀಫ್ ಮತ್ತು ಪಾಕ್ ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ.
ಅಕ್ಟೋಬರ್ 15-16 ರಂದು ಜೈಶಂಕರ್ ಅವರು ಪಾಕಿಸ್ತಾನ ಭೇಟಿ ಸುಮಾರು ಹತ್ತು ವರ್ಷಗಳಲ್ಲಿ ಭಾರತೀಯ ವಿದೇಶಾಂಗ ಸಚಿವರಿಂದ ಮೊದಲನೆಯದು.