ನವದೆಹಲಿ,ಅ.15(DaijiworldNews/TA):ಮಹತ್ವದ ರಾಜತಾಂತ್ರಿಕ ಕ್ರಮದಲ್ಲಿ, ಆರು ಕೆನಡಾದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಲು ಭಾರತ ಸರ್ಕಾರ ನಿರ್ಧರಿಸಿದೆ.
ಖಲಿಸ್ತಾನ ಉಗ್ರ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಪಿತೂರಿಯಿದೆ ಎಂದು ಕೆನಡಾ ಆರೋಪಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು ಅಲ್ಲಿರುವ ಹೈಕಮಿಷನರ್ ಮತ್ತು ಇತರ ಉದ್ದೇಶಿತ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ವಾಪಸ್ ಕರೆಯಿಸಿಕೊಂಡಿದೆ.
ಇದೀಗ ಭಾರತದಲ್ಲಿರುವ ಆರು ಕೆನಡಾ ರಾಜತಾಂತ್ರಿಕ ಅಧಿಕಾರಿಗಳು ದೇಶದಿಂದ ಹೊರಹಾಕಲು ನಿರ್ಧಿರಿಸಿದೆ. ಅಕ್ಟೋಬರ್ 19 ಶನಿವಾರ ರಾತ್ರಿ 11:59ರೊಳಗೆ ಅಥವಾ ಅದಕ್ಕೂ ಮೊದಲು ಭಾರತವನ್ನು ತೊರೆಯಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಪ್ಯಾಟ್ರಿಕ್ ಹೆಬರ್ಟ್ (ಡೆಪ್ಯುಟಿ ಹೈ ಕಮಿಷನರ್), ಲ್ಯಾನ್ ರಾಸ್ ಡೇವಿಡ್ ಟ್ರೈಟ್ಸ್ (ಫಸ್ಟ್ ಸೆಕ್ರೆಟರಿ),ಮೇರಿ ಕ್ಯಾಥರೀನ್ ಜೋಲಿ, (ಫಸ್ಟ್ ಸೆಕ್ರೆಟರಿ) , ಆಡಮ್ ಜೇಮ್ಸ್ ಚುಪ್ಕಾ((ಫಸ್ಟ್ ಸೆಕ್ರೆಟರಿ), ಸ್ಟೀವರ್ಟ್ ರಾಸ್ ವೀಲರ್ (ಹಂಗಾಮಿ ಹೈ ಕಮಿಷನರ್) ಪೌಲಾ ಒರ್ಜುಯೆಲಾ (ಫಸ್ಟ್ ಸೆಕ್ರೆಟರಿ) ಈ ಆರು ಜನ ಅಧಿಕಾರಿಗಳಿಗೆ ಅಕ್ಟೋಬರ್ 19 ಶನಿವಾರ ರಾತ್ರಿ 11:59ರೊಳಗೆ ಅಥವಾ ಅದಕ್ಕೂ ಮೊದಲು ಭಾರತವನ್ನು ತೊರೆಯಲು ಭಾರತ ಸರ್ಕಾರ ಸೂಚಿಸಿದೆ ಎಂದು ಹೇಳಲಾಗಿದೆ.