ಮೈಸೂರು, ಜೂ 02: (Daijiworld News/SM): ರಾಜ್ಯದಲ್ಲಿ ಮಧ್ಯಾಂತರ ಚುನಾವಣೆ ನಡೆಯುವುದು ಬೇಡ, ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರುವುದು ಬೇಡ. ಬಿಜೆಪಿ ಪಕ್ಷವನ್ನು ಕಾಂಗ್ರೆಸ್ಗೆ ದ್ವೇಷ ಮಾಡುವ ಅಗತ್ಯವಾದರೂ ಏನು ಎಂದು ಪೇಜಾರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಜತೆ ಸೇರಿರುವಾಗ ಬಿಜೆಪಿಯನ್ನು ದೂರ ಇಡುವ ಅಗತ್ಯ ಏನಿದೆ. ಕಾಂಗ್ರೆಸ್ನವರು ನಮ್ಮ ಶಾಸಕರು ಹೋಗುತ್ತಾರೆ ಎಂದು ಹಾಗೂ ಬಿಜೆಪಿಯವರು ನಮ್ಮ ಶಾಸಕರು ಹೋಗುತ್ತಾರೆ ಎನ್ನುವ ಮೂಲಕ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಇದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳತ್ತ ಪಕ್ಷಗಳು ಗಮನ ಹರಿಸಬೇಕಾಗಿದೆ.
ರಾಝ್ಯದಲ್ಲಿ ಇದೀಗ ಬರ ತಾಂಡವವಾಡುತ್ತಿದ್ದು, ಮೂರು ಪಕ್ಷಗಳು ಇದರ ಪರಿಹಾರ ಹಾಗೂ ಅಭಿವೃದ್ಧಿಯತ್ತ ಗಮನ ನೀಡಲಿ ಎಂದಿದ್ದಾರೆ. ಇನ್ನು ರಾಜ್ಯದಲ್ಲಿ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಲ್ಲಿಕಾರ್ಜು