ತಿರುವನಂತಪುರ, ಜೂ 02: (Daijiworld News/SM): ವಿದ್ಯಾರ್ಥಿನಿಯರಿಗೆ ಸಿಹಿತಿಂಡಿಯ ಆಮೀಷವೊಡ್ಡಿ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯೊಂದು ಕೇರಳದ ತಿರುವನಂತಪುರದಲ್ಲಿ ನಡೆದಿದ್ದು, ಆರೋಪಿ ಮದರಸಾ ಶಿಕ್ಷಕನನ್ನು ಬಂಧಿಸಲಾಗಿದೆ.

ಕೊಟ್ಟಾಯಂ ಜಿಲ್ಲೆಯ ಮದರಸಾವೊಂದರ ಶಿಕ್ಷಕ ವಿ.ಎಂ. ಯೂಸುಫ್ (60) ಬಂಧಿತ ಶಿಕ್ಷಕ. ತಿಸ್ಸೂರಿನ ಕೊಡುಗಲ್ಲೂರಿನಲ್ಲಿ ಬಂಧಿಸಲಾದ ಆರೋಪಿಯನ್ನು ಕೋರ್ಟ್ ಗೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿ ಬಂಧಿತ ಶಿಕ್ಷಕ ಯೂಸುಫ್ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ, ಸ್ವೀಟ್ ನೀಡುವುದಾಗಿ ಆಮೀಷವೊಡ್ಡಿ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.