ಪಶ್ಚಿಮ ಬಂಗಾಲ,ಜೂ03(Daijiworld News/AZM):ಬಿಜೆಪಿಯವರ ಜೈ ಶ್ರೀರಾಂ ಹೇಳಿಕೆಗೆ ಪ್ರತ್ಯುತ್ತರವೆಂಬಂತೆ ಮಮತಾ ಬ್ಯಾನರ್ಜಿಯವರು ತಮ್ಮ ಡಿಪಿ ಯನ್ನು ಬದಲಿಸಿಕೊಂಡಿದ್ದಾರೆ.
'ಜೈ ಹಿಂದ್, ಜೈ ಬಾಂಗ್ಲಾ' ಎಂಬ ಘೋಷಣೆಯೊಂದಿಗೆ ಸುಭಾಷ್ ಚಂದ್ರ ಬೋಸ್, ಗಾಂಧೀಜಿ, ಸ್ವಾಮಿ ವಿವೇಕಾನಂದ ಸೇರಿದಂತೆ ಮಹನೀಯರಿರುವ ಚಿತ್ರವನ್ನು ಮಮತಾ ಬ್ಯಾನರ್ಜಿ ತಮ್ಮ ಡಿಪಿ ಚಿತ್ರವನ್ನಾಗಿ ಬದಲಿಸಿಕೊಂಡಿದ್ದು, ಅವರೊಂದಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಹಲವರೂ ತಮ್ಮ ಡಿಪಿ ' ಬದಲಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಟಿಎಂಸಿ ಮುಖಂಡೆ ಮಮತಾ ಬ್ಯಾನರ್ಜಿ ಅವರು ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಕೆಲವರು ರಸ್ತೆಯಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು.
ಇದರಿಂದ ಕೋಪಗೊಂಡ ಮಮತಾ ಬ್ಯಾನರ್ಜಿ ಕಾರಿನಿಂದ ಇಳಿದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, "ನಾನು ಈ ಎಲ್ಲಾ ಜನರನ್ನು ಬಲ್ಲೆ. ಇವರಿಗೆಲ್ಲ ನಾನು ಸವಾಲು ಹಾಕುತ್ತೇನೆ. ನಾನು ನಿಮಗೆ ಇಲ್ಲಿ ಹೊಡೆದರೆ, ಬೇರೆಲ್ಲೋ ನ್ಯಾಯ ಸಿಕ್ಕುತ್ತದೆ" ಎಂದು ಗುಡುಗಿದ್ದರು.
ನಂತರ ತಮ್ಮೊಂದಿಗಿದ್ದ ಭದ್ರತಾ ಸಿಬ್ಬಂದಿ ಬಳಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಎಲ್ಲ ಹೆಸರನ್ನೂ ನೋಟ್ ಮಾಡಿಕೊಳ್ಳುವಂತೆ ಆದೇಶಿಸಿದರು. ಜೈ ಶ್ರೀ ರಾಮ್ ಎಂದು ಮತ್ತು ನನ್ನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದವರು ಕ್ರಿಮಿನಲ್ ಗಳಾಗಿದ್ದು, ಇವರೆಲ್ಲ ಬಿಜೆಪಿ ಕಾರ್ಯಕರ್ತರು ಮತ್ತು ಹೊರ ರಾಜ್ಯದವರಾಗಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆಗೆ ಅವರು ಹೇಳಿಕೆ ನೀಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಜೈ ಶ್ರೀ ರಾಮ್ ಎಂದು ಕೂಗಿದವರನ್ನು ಜೈಲಿಗೆ ಅಟ್ಟಲಾಗುವುದು ಎಂದು ಅವರು ಹೂಂಕರಿಸಿದ್ದರು.
ಅಲ್ಲಿದೆ ಬಿಜೆಪಿಯವರು ಜೈಶ್ರೀರಾಂ ಎಂದು ಬರೆದಿರುವ ೧೦ ಲಕ್ಷ ಪೋಸ್ಟ್ ಕಾರ್ಡ್ ಗಳನ್ನು ದೀದಿಗೆ ಕಳುಹಿಸಿಕೊಡುವುದಾಗಿ ಹೇಳಿದ್ದರು.