ಬೆಂಗಳೂರು, ಅ.19(DaijiworldNews/AK):ಮೈಸೂರು ಮುಡಾ ದಾಖಲೆಗಳನ್ನು ಕಾರು ಮತ್ತು ಹೆಲಿಕಾಪ್ಟರ್ನಲ್ಲಿ ತಂದ ಸಚಿವ ಬೈರತಿ ಸುರೇಶ್ ನಿಜವಾದ ಕಳ್ಳ. ಕಾಂಗ್ರೆಸ್ನವರು ನಾಲಿಗೆ ಬಿಗಿಹಿಡಿದು ಮಾತನಾಡಬೇಕು. ನಾನು ಕಳ್ಳನಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಎಚ್ಚರಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವೈಟ್ನರ್ ಹಾಕಿದ್ದು ಯಾರು? ನೀವೇ ಆ ಇಲಾಖೆಗೆ ಸಚಿವರು; ಇ.ಡಿ. ಕೇಳಿದ ತಕ್ಷಣ ನೀವು ದಾಖಲೆ ಕೊಡಬೇಕಿತ್ತು. 3 ಸಾರಿ ನೋಟಿಸ್ ಬಂದರೂ ಯಾಕೆ ದಾಖಲೆ ಕೊಟ್ಟಿಲ್ಲ? ಅಲ್ಲಿಗೆ ಕದ್ದು ಓಡಾಡುವವರು ನೀವಾ ನಾವಾ ಎಂದು ಪ್ರಶ್ನಿಸಿದರು.
ಸಚಿವ ಸುರೇಶ್ ಅವರೇ ಮುಖ್ಯಮಂತ್ರಿಗಳನ್ನೂ ಸಿಕ್ಕಿಹಾಕಿಸಿದ್ದಾರೆ. ನೀವು ಮುಖ್ಯಮಂತ್ರಿಗಳ ಮಾನಸಪುತ್ರ ಎಂದ ಅವರು, ಮಾನ್ಯ ಕುಮಾರಸ್ವಾಮಿ ಅವರ ಬಳಿ ಕಡತ ಇರಬಹುದು ಎಂದು ಸುರೇಶ್ ಹೇಳಿದ್ದು, ಹಾಗಿದ್ದರೆ ಅವರೇನು ಸಂಬಂಧಿಸಿದ ಇಲಾಖೆ ಸಚಿವರೇ? ಅವರ ಹತ್ತಿರ ಯಾಕೆ ಇರುತ್ತದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.ಛಲವಾದಿ ನಾರಾಯಣಸ್ವಾಮಿ ಫೈಲ್ ಕದ್ದುಕೊಂಡು ಹೋಗಿರಬೇಕು ಎಂದಿದ್ದಾರೆ. ಮಿಸ್ಟರ್ ಸುರೇಶ್ ಅವರೇ, ನೀವು ಸಚಿವರಾಗಲೂ ಯೋಗ್ಯರಲ್ಲ. ನಾನೇನಾದರೂ ಕದ್ದುಕೊಂಡು ಹೋಗಿದ್ದರೆ ದೂರು ನೀಡಬೇಕಿತ್ತಲ್ಲವೇ? ನಾಲಿಗೆ ಹೇಗಾದರೂ ಹೋಗುತ್ತದೆಂದು ಹೇಳಿಕೆ ಕೊಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.