ಕಲಬುರಗಿ, ಅ.19(DaijiworldNews/AK):ವಿಧಾನ ಪರಿಷತ್ ಬಿಜೆಪಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಸುನಿಲ್ ವಲ್ಯಾಪುರೆ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
2022ರಲ್ಲಿ ಸುನೀಲ್ ವಲ್ಯಾಪುರೆ ಪುತ್ರ ವಿನಯ್ ವಲ್ಯಾಪುರೆಯಿಂದ ಭೋವಿ ನಿಗಮದಲ್ಲಿ ಅಕ್ರಮದ ಕುರಿತು ದೂರು ದಾಖಲಾಗಿತ್ತು. ಒಟ್ಟು ನಿಗಮದ 12 ಕೋಟಿ ರೂ. ಹಣ ದುರ್ಬಳಕೆ ಆರೋಪದ ಮಾತು ಕೇಳಿ ಬಂದಿತ್ತು.ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ನಿಂದ ಸರ್ಚ್ ವಾರೆಂಟ್ ಪಡೆದ ಸಿಐಡಿ, ನಗರದ ಸಂತೋಷ್ ಕಾಲೊನಿಯಲ್ಲಿನ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ.
2022 ರಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿತ್ತು. ನಿಗಮದ ಯೋಜನೆಗಳಿಗೆ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ನಿಗಮದ ಹಣವನ್ನು ವಿನಯ್ ವಲ್ಯಾಪುರೆ ತಮ್ಮ ಒಡೆತನದ ಸೋಮನಾಥೇಶ್ವರ ಎಂಟರ್ಪ್ರೈಸಸ್ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ದೂರು ದಾಖಲಾಗಿತ್ತು.