ನವದೆಹಲಿ,ಜೂ03(Daijiworld News/AZM): ಕರ್ನಾಟಕ ರಾಜ್ಯಕ್ಕೆ ಸದ್ಯದಲ್ಲೇ ಮಹಿಳಾ ಗವರ್ನರ್ ನೇಮಕರಾಗಲಿದ್ದು, ಸಂಭವನೀಯ ಪಟ್ಟಿಯಲ್ಲಿ ಮೂವರ ಹೆಸರುಗಳಿವೆ.
ರಾಜ್ಯಪಾಲರ ಹುದ್ದೆಗೆ ಬಿಜೆಪಿಯ ಹಿರಿಯ ನಾಯಕಿಯರಾದ ಸುಷ್ಮಾ ಸ್ವರಾಜ್, ಉಮಾಭಾರತಿ ಹಾಗೂ ಸುಮಿತ್ರ ಮಹಾಜನ್ ಹೆಸರುಗಳು ಕೇಳಿ ಬಂದಿವೆ. ಆದರೆ ಅದರಲ್ಲಿ ಅಂತಿಮವಾಗಿ ಯಾರು ರಾಜ್ಯಕ್ಕೆ ರಾಜ್ಯಪಾಲರಾಗಿ ಬರುತ್ತಾರೆ ಎಂಬುದು ಕಾದು ನೋಡಬೇಕು.
ರಾಜ್ಯಕ್ಕೆ ಶೀಘ್ರವಾಗಿ ನೂತನ ಮಹಿಳಾ ಗವರ್ನರ್ ಬರುವುದು ಖಚಿತವಾಗಿದ್ದು, 25 ವರ್ಷದ ಹಿಂದೆ ರಾಮಾದೇವಿಯವರು ರಾಜ್ಯದ ಮಹಿಳಾ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಎರಡೂವರೆ ದಶಕದ ನಂತರ ಮತ್ತೋರ್ವ ಮಹಿಳಾ ರಾಜ್ಯಪಾಲರು ರಾಜ್ಯಕ್ಕೆ ಬರುವುದು ಫಿಕ್ಸ್ ಆಗಿದೆ.