ದಾವಣಗೆರೆ, ಅ.20(DaijiworldNews/AA): ಕ್ಯಾಬಿನೆಟ್ಗೂ ಮುನ್ನವೇ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಮುಖಂಡರ ಸಭೆ ನಡೆಯಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಸಭೆಗೂ ಮುನ್ನವೇ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಯಲಿದೆ. ಅ.22ರ ಮಂಗಳವಾರ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಂದುವರೆದು ಇದರಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಎಂಬ ವಿಚಾರ ಬರುವುದಿಲ್ಲ. ಲಿಂಗಾಯತ ಸಮಾಜದ ಎಲ್ಲಾ ಮುಖಂಡರು ಸೇರಿ ಸಭೆ ಮಾಡುತ್ತಿದ್ದೇವೆ. ಈ ಸಭೆ ನಡೆದೇ ನಡೆಯುತ್ತದೆ. ಇದು ನಮ್ಮ ಸಮಾಜದ ಪ್ರಶ್ನೆಯೇ ಹೊರತು ಪಕ್ಷದ ಪ್ರಶ್ನೆ ಅಲ್ಲ ಎಂದರು.