ನವದೆಹಲಿ,ಜೂ03(Daijiworld News/AZM):ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಹರ್ಷವರ್ಧನ್ ಅವರು ಸೈಕಲ್ ನಲ್ಲಿ ಕಚೇರಿಗೆ ಬಂದು ತಮ್ಮ ಅಧಿಕಾರ ಸ್ವೀಕರಿಸಿರುವುದು ಎಲ್ಲರ ಗಮನಸೆಳೆದಿದೆ.
ವಿಶ್ವ ಸೈಕಲ್ ದಿನಾಚರಣೆ ಸಂದರ್ಭದಲ್ಲಿ ಸಚಿವ ಹರ್ಷವರ್ಧನ್ ಕಾರು ಬಿಟ್ಟು ಸೈಕಲ್ ಏರಿರುವುದು ಗಮನಾರ್ಗಹ ಸಂಗತಿ. ಸೈಕಲ್ ತುಳಿಯುವುದು ಸರಳ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಶುದ್ಧ ಮತ್ತು ಸುಸ್ಥಿರ ಪರಿಸರಕ್ಕೆ ಸೂಕ್ತ ಮಾರ್ಗವಾಗಿದೆ ಎಂದು ಸಚಿವ ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.
ಜೂನ್ 3 ವಿಶ್ವ ಬೈಸಿಕಲ್ ದಿನ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ ಘೋಷಿಸಿದೆ. ಈ ದಿನದಂದು ಸೈಕಲ್ ಬಳಸುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಿ. ಪರಿಸರ ಉಳಿವು ಮತ್ತು ವಾಯು ಮಾಲಿನ್ಯ ತಡೆಗೆ ಸೈಕಲ್ ಓಡಿಸುವುದು ನಮ್ಮ ನೆಚ್ಚಿನ ಕ್ರೀಡೆ ಎಂದು ಮುಂದುವರಿಯುವ ಅಗತ್ಯವಿದೆ ಎಂದು ಹೇಳಿದೆ.