ಚೆನ್ನೈ , ಅ.25(DaijiworldNews/AK) :ಕಾಟ್ಪಾಡಿ ಜಂಕ್ಷನ್ ಬಳಿ ಚೆನ್ನೈ ಹಾಗೂ ಬೆಂಗಳೂರುಮಾರ್ಗದಲ್ಲಿ ಸಂಚರಿಸುವ 22 ಬೋಗಿಗಳುಳ್ಳ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಪ್ರತ್ಯೇಕಗೊಂಡ ಘಟನೆ ಶುಕ್ರವಾರ ನಡೆದಿದೆ.
ಈ ಘಟನೆಯು ಬೆಳಿಗ್ಗೆ 8.50ಕ್ಕೆ ವೆಲ್ಲೂರು ಜಿಲ್ಲೆಯ ತಿರುವಲಂ ನಿಲ್ದಾಣದಲ್ಲಿ ನಡೆದಿದೆ. ದಿಬ್ರುಗಡ – ಕನ್ಯಾಕುಮಾರಿ ವಿವೇಕ ಎಕ್ಸ್ಪ್ರೆಸ್ ರೈಲು ಕಾಟ್ಪಾಡಿ ರೈಲ್ವೆ ನಿಲ್ದಾಣದತ್ತ ಹೊರಟಿತ್ತು. ಬೋಗಿಗಳಿಂದ ಎಂಜಿನ್ ಪ್ರತ್ಯೇಕಗೊಂಡಿತು ಎನ್ನಲಾಗಿದೆ.
ಪ್ರತ್ಯೇಕಗೊಂಡ ಎಂಜಿನ್ ಸುಮಾರು 500 ಮೀಟರ್ ಸಾಗಿತು. ಬೋಗಿ ಪ್ರತ್ಯೇಕಗೊಂಡಿದ್ದನ್ನು ಗಮನಿಸಿ ನಂತರ ನಿಲ್ಲಿಸಲಾಯಿತು. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಎಂಜಿನ್ - ಬೋಗಿ ಜೋಡಣಾ ಕೊಂಡಿ ಮುರಿದಿದ್ದೇ ಘಟನೆಗೆ ಕಾರಣ. ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.